ಟಿ20: ಶರತ್, ರೋಹನ್ ಧಾಂ ಧೂಂ ಬ್ಯಾಟಿಂಗ್.. ಬಂಗಾಳ ಧೂಳೀಪಟ

0

ಕರ್ನಾಟಕದ ಯುವ ಬ್ಯಾಟ್ಸ್ ಮನ್ ಗಳಾದ ಬಿ.ಆರ್ ಶರತ್(50) ಮತ್ತು ರೋಹನ್ ಕದಂ(ಅಜೇಯ 81) ಅವರ ಬ್ಯಾಟಿಂಗ್ ಅಬ್ಬರಕ್ಕೆ ಬಂಗಾಳ ಧೂಳೀಪಟಗೊಂಡಿದೆ.  ಬಂಗಾಳ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವು ತನ್ನದಾಗಿಸಿಕೊಂಡಿದೆ.

ಕಟಕ್ ನಲ್ಲಿ ಶುಕ್ರವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಂಗಾಳ, ಕನ್ನಡಿಗ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿ 19.4 ಓವರ್ ಗಳಲ್ಲಿ ಕೇವಲ 131 ರನ್ನಿಗೆ ಆಲೌಟಾಯಿತು. ಬಂಗಾಳ ಪರ ಶ್ರೀವತ್ಸ್ ಗೋಸ್ವಾಮಿ(40) ಮತ್ತು ನಾಯಕ ಮನೋಜ್ ತಿವಾರಿ(36) ಮಾತ್ರ ಕೊಂಚ ಹೋರಾಟ ಪ್ರದರ್ಶಿಸಿದರು.

ಕರ್ನಾಟಕ ಪರ ಅಮೋಘ ದಾಳಿ ಸಂಘಟಿಸಿದ ಪೀಣ್ಯ ಎಕ್ಸ್ ಪ್ರೆಸ್ ಅಭಿಮನ್ಯು ಮಿಥುನ್(3/22) 3 ವಿಕೆಟ್ ಉರುಳಿಸಿದರೆ, ಮಾಜಿ ನಾಯಕ ಆರ್.ವಿನಯ್ ಕುಮಾರ್(2/18) ಮತ್ತು ಯುವ ಆಲ್ರೌಂಡರ್ ಮನೋಜ್ ಭಾಂಡಗೆ(2/18) ತಲಾ ಎರಡು ವಿಕೆಟ್ ಉರುಳಿಸಿದರು. ಮತ್ತೊಮ್ಮೆ ಬಿಗು ದಾಳಿ ಸಂಘಟಿಸಿದ ಸ್ಪಿನ್ನರ್ ಕೆ.ಸಿ ಕಾರಿಯಪ್ಪ 4 ಓವರ್ ಗಳಲ್ಲಿ ಕೇವಲ 19 ರನ್ನಿತ್ತು 1 ವಿಕೆಟ್ ಪಡೆದರು.

ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹನ್ ಕದಂ ಮತ್ತು ಬಿ.ಆರ್ ಶರತ್ 14.3 ಓವರ್ ಗಳಲ್ಲಿ 117 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಬಂಗಾಳ ದಾಳಿಯನ್ನು ಚಿಂದಿ ಉಡಾಯಿಸಿದ ವಿಕೆಟ್ ಕೀಪರ್ ಶರತ್ 37 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿ ಔಟಾದರೆ, ಎಡಗೈ ದಾಂಡಿಗ ರೋಹನ್ ಕದಂ 55 ಎಸೆತಗಳಲ್ಲಿ 10 ಬೌಂಡರಿಗಳು ಮತ್ತು 2 ಸಿಕ್ಸರ್ಸ್ ನೆರವಿನೊಂದಿಗೆ ಅಜೇಯ 81 ರನ್ ಸಿಡಿಸಿದರು.

ಭಾನುವಾರ ನಡೆಯಲಿರುವ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ಅರುಣಾಚಲ ಪ್ರದೇಶ ತಂಡವನ್ನು ಎದುರಿಸಲಿದೆ.

Brief scores

Bengal: 131 all out in 19.4 overs (Shreevats Goswami 40, Manoj Tiwary 36; A Mithun 3/22, R Vinay Kumar 2/18, Manoj Bhandage 2/18, KC CAriyappa 1/19) lost to Karnataka: 134/1 in 15.5 overs (Rohan Kadam 81 not out, BR Sharath 50) by 9 wickets.

LEAVE A REPLY

Please enter your comment!
Please enter your name here

twenty + four =