ದೇಶ ಕಾಯುವ ಸೈನಿಕರಿಗೆ KSCA ಗೌರವ.. ರಾಜ್ಯ ಕ್ರಿಕೆಟ್ ಸಂಸ್ಥೆಗೊಂದು ಸಲಾಂ..!

0

ಬೆಂಗಳೂರು, ಮಾರ್ಚ್ 28: ಸದಾ ಸಾಮಾಜಿಕ ಬದ್ಧತೆ ಮೆರೆಯುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಐಪಿಎಲ್-12 ಟೂರ್ನಿಯಲ್ಲಿ ದೇಶ ಕಾಯುವ ಸೈನಿಕರಿಗೆ ತನ್ನದೇ ವಿಶಿಷ್ಠ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 7 ಐಪಿಎಲ್ ಪಂದ್ಯಗಳಿಗೆ ಸೈನಿಕರನ್ನು ಆಹ್ವಾನಿಸಲು ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. ಪ್ರತಿ ಪಂದ್ಯಕ್ಕೆ ಪ್ರತಿ ಪಂದ್ಯಕ್ಕೆ 60 ಸೈನಿಕರನ್ನು ಕೆಎಸ್ ಸಿಎ ಆಹ್ವಾನಿಸಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಗುರುವಾರದ ಪಂದ್ಯಕ್ಕೂ 60 ಸೈನಿಕರನ್ನು ಆಹ್ವಾನಿಸಲಾಗಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಈ ಕಾರ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮತ್ತು ಭಾರತಿ ಸಿಮೆಂಟ್ಸ್ ಸಂಸ್ಥೆಗಳೂ ಕೈಜೋಡಿಸಿದೆ. KSCA, RCB ಮತ್ತು ಭಾರತಿ ಸಿಮೆಂಟ್ಸ್ ಪ್ರತಿ ಪಂದ್ಯಗಳಿಗೆ ಸೈನಿಕರಿಗೆ ತಲಾ 20 ಟಿಕೆಟ್ ಗಳನ್ನು ಒದಗಿಸಲಿವೆ.

”ಸೈನಿಕರು ದೇಶದ ಹೆಮ್ಮೆ. ಆರ್ ಸಿ ಬಿ ಮತ್ತು ಭಾರತಿ ಸಿಮೆಂಟ್ಸ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್-12ರ ಎಲ್ಲಾ ಪಂದ್ಯಗಳಿಗೆ ತಲಾ 60 ಸೈನಿಕರನ್ನು ಆಹ್ವಾನಿಸುತ್ತದೆ” ಎಂದುು KSCA ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸದಾ ಒಂದಿಲ್ಲೊಂದು ಕಾರ್ಯಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಸಬ್ ಏರ್ ಸಿಸ್ಟಮ್ ಅಳವಡಿಸಿದ ವಿಶ್ವದ ಮೊದಲ ಕ್ರಿಕೆಟ್ ಮೈದಾನವೆಂಬ ಹಿರಿಮೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿದೆ. ಅಷ್ಟೇ ಅಲ್ಲದೆ, ಸೋಲಾರ್ ಪವರ್ ಅಳವಡಿಸಿದ ಮೊದಲ ಕ್ರಿಕೆಟ್ ಸಂಸ್ಥೆ ಎಂಬ ಹಿರಿಮೆಯನ್ನೂ ಕೆಎಸ್ ಸಿಎ ಹೊಂದಿದೆ.

LEAVE A REPLY

Please enter your comment!
Please enter your name here

1 × two =