ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ಜಯ ತಂದ ದಾವಣಗೆರೆ ಎಕ್ಸ್‌ಪ್ರೆಸ್-ಪೀಣ್ಯ ಎಕ್ಸ್‌ಪ್ರೆಸ್

0

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಛತ್ತೀಸ್ ಗಢ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿ ಸತತ 5ನೇ ಗೆಲುವು ದಾಖಲಿಸಿದೆ. ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ಆರ್.ವಿನಯ್ ಕುಮಾರ್ ಮತ್ತು ಪೀಣ್ಯ ಎಕ್ಸ್ ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಅವರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಕರ್ನಾಟಕ ರೋಚಕ ಗೆಲುವು ಸಾಧಿಸಿತು.

ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಛತ್ತೀಸ್ ಗಢ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171 ರನ್ ಗಳ ಉತ್ತಮ ಮೊತ್ತ ಕಲೆ ಹಾಕಿತು. ನಂತರ ಟಾರ್ಗೆಟ್ ಚೇಸ್ ಮಾಡಿದ ಕರ್ನಾಟಕ 19.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ‘ಡಿ’ ಗುಂಪಿನಲ್ಲಿ ಸತತ 5ನೇ ಗೆಲುವು ತನ್ನದಾಗಿಸಿಕೊಂಡಿತು.

ಗುರಿ ಬೆನ್ನತ್ತಿದ ಕರ್ನಾಟಕ ಪ್ರಮುಖ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದಾಗಿ 16.3 ಓವರ್ ಗಳಲ್ಲಿ 122 ರನ್ನಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಮಾಜಿ ನಾಯಕ ವಿನಯ್ ಕುಮಾರ್ ಮತ್ತು ಮಿಥುನ್ ಜೊತೆಗೂಡಿದಾಗ ಕರ್ನಾಟಕ ತಂಡ 21 ಎಸೆತಗಳಲ್ಲಿ 50 ರನ್ ಗಳಿಸಬೇಕಿತ್ತು. 

ಈ ಸಂದರ್ಭದಲ್ಲಿ ಇಬ್ಬರೂ ಸಿಕ್ಸರ್ ಗಳ ಸುರಿಮಳೆಗೈದು ಕರ್ನಾಟಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಮುರಿಯದ 7ನೇ ವಿಕೆಟ್ ಗೆ ವಿನಯ್ ಮತ್ತು ಮಿಥುನ್ ಕೇವಲ 17 ಎಸೆತಗಳಲ್ಲಿ 53 ರನ್ ಗಳ ಜೊತೆಯಾಟವಾಡಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುತ್ತಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೇವಲ 13 ಎಸೆತಗಳನ್ನೆದುರಿಸಿದ ವಿನಯ್ 4 ಸಿಕ್ಸರ್ಸ್ ನೆರವಿನಿಂದ ಅಜೇಯ 34 ರನ್ ಗಳಿಸಿದರೆ, ಮಿಥುನ್ 7 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ ಅಜೇಯ 18 ರನ್ ಗಳಿಸಿದರು.

Brief scores

Chhattisgarh: 171/3 in 20 overs (Harpreet Singh Bhatia 79, Amandeep Khare 45 not out; A Mithun 1/46, V Koushik 1/36, Shreyas Gopal 1/19) lost to Karnataka: 175/6 in 19.2 overs (J Suchit 34, R Vinay Kumar 34 not out, Karun Nair 35; Aishwary Marya 2/13) by 4 wickets.

LEAVE A REPLY

Please enter your comment!
Please enter your name here

fourteen − fourteen =