ಕುಂಬ್ಳೆ ಕ್ಯಾಮೆರಾದಲ್ಲಿ ಸೆರೆಯಾದ ಅದ್ಭುತ ಚಿತ್ರವಿದು..!

0

ಬೆಂಗಳೂರು, ಮೇ 30: ಕ್ರಿಕೆಟ್ ದಿಗ್ಗಜ, ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಗಳಲ್ಲಿ ಒಬ್ಬರು. ಅಷ್ಟೇ ಅಲ್ಲ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಕುಂಬ್ಳೆ ಭಾರತಕ್ಕೆ ಮೊದಲಿಗ ಹಾಗೂ ವಿಶ್ವದಲ್ಲಿ 3ನೇ ಸ್ಥಾನಿ. ಟೆಸ್ಟ್ ಕ್ರಿಕೆಟ್ ನಲ್ಲಿ ಜಂಬೊ 619 ವಿಕೆಟ್ ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ಸ್ ಪಡೆದ ವಿಶ್ವದಾಖಲೆಯನ್ನೂ ಕುಂಬ್ಳೆ ಬರೆದಿದ್ದಾರೆ.

ಕ್ರಿಕೆಟ್ ಮೈದಾನದ ಸೇನಾನಿ ಕುಂಬ್ಳೆ ಹವ್ಯಾಸಿ ಫೋಟೊಗ್ರಾಫರ್ ಕೂಡ ಹೌದು. ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆ ಹಿಡಿಯುವುದರಲ್ಲಿ ಕುಂಬ್ಳೆ ಅವರನ್ನು ಎತ್ತಿದ ಕೈ. ಚಿತ್ತಾಕರ್ಷಕ ಫೋಟೋಗಳನ್ನು ಸೆರೆ ಹಿಡಿಯುವ ಕುಂಬ್ಳೆ ಇತ್ತೀಚೆಗೆ ತಾವು ಬೆಂಗಳೂರಿನಲ್ಲಿ ಕ್ಲಿಕ್ಕಿಸಿದ ಹಕ್ಕಿಯ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಪ್ರಕಟಸಿದ್ದಾರೆ.

LEAVE A REPLY

Please enter your comment!
Please enter your name here

2 × five =