6 ಎಸೆತಗಳಲ್ಲಿ 6 ಸಿಕ್ಸರ್ಸ್… 69 ಎಸೆತ, 237 ರನ್..! ಮಂಗಳೂರು ಹುಡುಗನ ಅದ್ಭುತ ಸಾಧನೆ

0

ಬೆಂಗಳೂರು, ಜೂನ್ 14: ಎದುರಿಸಿದ್ದು 69 ಎಸೆತ.. ಸಿಡಿಸಿದ್ದು 237 ರನ್. ಅದರಲ್ಲಿ 18 ಬೌಂಡರಿಗಳು ಮತ್ತು 25 ಸಿಕ್ಸರ್ಸ್.. ಒಂದೇ ಓವರ್ನಲ್ಲಿ ಆರು ಸಿಕ್ಸರ್ಸ್ ಸಾಧನೆ.. ಇದು ಮಂಗಳೂರಿನ ಮೆಕ್ನೀಲ್ ನರೋನ್ಹ ಎಂಬ 17 ವರ್ಷದ ಯುವಕನ ಅದ್ಭುತ ಸಾಧನೆ.

ಬೆಂಗಳೂರಿನಲ್ಲಿರುವ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್(ಕೆಐಒಸಿ) ತಂಡದ ಪರ ಆಡುತ್ತಿರುವ ಮೆಕ್ನೀಲ್ ರಘು ಕ್ರಿಕೆಟ್ ಅಕಾಡೆಮಿ ವಿರುದ್ಧದ ಟಿ20 ಪಂದ್ಯದಲ್ಲಿ ಈ ಅಮೋಘ ಸಾಧನೆ ಮಾಡಿದ್ದಾರೆ. 19 ವರ್ಷದೊಳಗಿನವರ ಟೂರ್ನಿಯ ಪಂದ್ಯದಲ್ಲಿ ಮೆಕ್ನೀಲ್ ನರೋನ್ಹ ಈ ಸಿಡಿಲಬ್ಬರದ ಆಟವಾಡಿ ಗಮನ ಸೆಳೆದಿದ್ದಾರೆ. ಈ ಸ್ಫೋಟಕ ಇನ್ನಿಂಗ್ಸ್ ಸಂದರ್ಭದಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ಸ್ ಸಿಡಿಸಿದ್ದಾರೆ. ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಒಂದೇ ಓವರ್ನಲ್ಲಿ ಆರು ಸಿಕ್ಸರ್ಸ್ ಸಿಡಿಸಿದ ವಿಶ್ವದಾಖಲೆ ಹೊಂದಿದ್ದಾರೆ.

ಮಂಗಳೂರಿನವರಾದ ಮೆಕ್ನೀಲ್ ಅವರ ಕುಟುಂಬ ದುಬೈನಲ್ಲಿ ನೆಲೆಸಿದೆ. ಮೆಕ್ನೀಲ್ ಬೆಂಗಳೂರಿನಲ್ಲಿರುವ ವಿಶ್ವದರ್ಜೆಯ ಕೆಐಒಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಾರೆ. ಯುಎಇ U-16, U-19 ತಂಡಗಳ ಪರ ಆಡಿರುವ ಮೆಕ್ನೀಲ್ ಅಲ್ಲೂ ಕೂಡ ಸ್ಫೋಟಕ ದ್ವಿಶತಕ ಸಿಡಿಸಿದ್ದರು.

LEAVE A REPLY

Please enter your comment!
Please enter your name here

seventeen − 13 =