ವಿಶ್ವಕಪ್ ತಂಡದಿಂದ ಹೊರಗಿಟ್ಟ ಆಯ್ಕೆ ಸಮಿತಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ ಪಾಂಡೆ..!

0
PC: IPL/Twitter

ಚೆನ್ನೈ, ಏಪ್ರಿಲ್ 23: ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ತಮ್ಮನ್ನು ವಿಶ್ವಕಪ್ ತಂಡದಿಂದ ಹೊರಗಿಟ್ಟಿರುವ ಬಿಸಿಸಿಐ ಆಯ್ಕೆ ಸಮಿತಿಗೆ ಬ್ಯಾಟ್ ನಿಂದಲೇ ಭರ್ಜರಿ ಉತ್ತರ ನೀಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ 29 ವರ್ಷದ ಮನೀಶ್ ಪಾಂಡೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಕ್ಷರಶಃ ಅಬ್ಬರಿಸಿ ಕೇವಲ 49 ಎಸೆತಗಳಲ್ಲಿ ಅಜೇಯ 83 ರನ್ ಸಿಡಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ಪಾಂಡೆ 7 ಬೌಂಡರಿಗಳು ಮತ್ತು 3 ಸಿಕ್ಸರ್ಸ್ ಸಿಡಿಸಿದರು. ಈ ಮೂಲಕ ಅರ್ಹತೆಯಿದ್ದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡದ ಆಯ್ಕೆ ಸಮಿತಿಗೆ ಆಟದಿಂದಲೇ ಉತ್ತರ ಕೊಟ್ಟರು. ಐಸಿಸಿ ವಿಶ್ವಕಪ್ ಟೂರ್ನಿ ಮೇ 30ರಂದು ಇಂಗ್ಲೆಂಡ್ ನಲ್ಲಿ ಆರಂಭವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸುವ ಮೂಲಕ ತಮ್ಮನ್ನು ಇಷ್ಟು ದಿನ ಆಡುವ ಬಳಗದಿಂದ ಹೊರಗಿಟ್ಟ ಸನ್ ರೈಸರ್ಸ್ ಹೈದರಾಬಾದ್ ಟೀಮ್ ಮ್ಯಾನೇಜ್ಮೆಂಟ್ ಗೂ ಪಾಂಡೆ ಬ್ಯಾಟ್ ನಿಂದಲೇ ಉತ್ತರಿಸಿದರು.

ಕೇವಲ 25 ಎಸೆತಗಳಲ್ಲಿ ಐಪಿಎಲ್ ವೃತ್ತಿಜೀವನದ ತಮ್ಮ ವೇಗದ ಅರ್ಧಶತಕ ಬಾರಿಸಿದ ಪಾಂಡೆ, ಐಪಿಎಲ್ ನಲ್ಲಿ ಒಟ್ಟಾರೆ 12ನೇ ಅರ್ಧಶತಕದ ಸಾಧನೆ ಮಾಡಿದರು.

ಐಪಿಎಲ್-12ರಲ್ಲಿ ಮೊದಲ ಆರು ಪಂದ್ಯಗಳಲ್ಲಿ ಆಡಿದ 5 ಇನ್ನಿಂಗ್ಸ್ ಗಳಲ್ಲಿ (8*, 1, 10, 16, 19) ಪಾಂಡೆ ಕೇವಲ 54 ರನ್ ಗಳಿಸಿದ್ದರು.

LEAVE A REPLY

Please enter your comment!
Please enter your name here

twelve + one =