ಉಗ್ರರ ಮೇಲೆ ಏರ್ ಸ್ಟ್ರೈಕ್: ತಂದೆಯನ್ನು ನೆನಪಿಸಿಕೊಂಡದ್ದೇಕೆ ಮನೀಶ್ ಪಾಂಡೆ..?

0
PC: Twitter/Manish Pandey

ಪಾಕಿಸ್ತಾನ ಪ್ರಾಯೋಜಿತ ಉಗ್ರರ ಮೇಲೆ ಭಾರತದ ವಾಯುಪಡೆ ಏರ್ ಸ್ಟ್ರೈಕ್ ಮಾಡಿ ಪುಲ್ವಾಮ ಉಗ್ರ ದಾಳಿಗೆ ಸೇಡು ತೀರಿಸಿಕೊಂಡಿದೆ. ಭಾರತದ ಏರ್ ಸ್ಟ್ರೈಕ್ ಸಂದರ್ಭದಲ್ಲಿ ಜೈಷ್ ಎ ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ 25 ಕಮಾಂಡರ್ಸ್ ಸೇರಿದಂತೆ ಕನಿಷ್ಠ 250ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಭಾರತದ ವಾಯುಪಡೆಯ ಸಾಹಸಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮನೀಶ್ ಪಾಂಡೆ ತಮ್ಮ ತಂದೆಯನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

”ನಾನು ಆರ್ಮಿ ಫ್ಯಾಮಿಲಿಯಿಂದ ಬಂದವನು. ನಮ್ಮ ಸೈನಿಕರು ನಮಗಾಗಿ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದನ್ನು ನಾನು ಅರಿತಿದ್ದೇನೆ. ಸೇನೆಯ ಬಗ್ಗೆ ನಾನು ಅತ್ಯಂತ ಹೆಮ್ಮೆ ಪಟ್ಟ ದಿನಗಳಲ್ಲಿ ಇದೂ ಒಂದು” ಎಂದು ಪಾಂಡೆ ಟ್ವೀಟ್ ಮಾಡಿದ್ದಾರೆ.

ಮನೀಶ್ ಪಾಂಡೆ ಅವರ ತಂದೆ ಎ.ಕೆ ಪಾಂಡೆ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು. ಕರ್ನಾಟಕದ ಮತ್ತೊಬ್ಬ ಆಟಗಾರ ಮಯಾಂಕ್ ಅಗರ್ವಾಲ್ ಕೂಡ ವಾಯುಪಡೆಯ ಸಾಹಸಕ್ಕೆ ಸಲಾಂ ಹೇಳಿದ್ದಾರೆ.

LEAVE A REPLY

Please enter your comment!
Please enter your name here

17 + 13 =