ಐಪಿಎಲ್-12: ಅಭ್ಯಾಸ ಪಂದ್ಯದಲ್ಲೇ ಪವರ್ ತೋರಿಸಿದ ಕನ್ನಡಿಗ ಪಾಂಡೆ..!

0
PC: Sunrisers Hyderabad/Twitter

ಹೈದರಾಬಾದ್, ಮಾರ್ಚ್ 17: ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಐಪಿಎಲ್-12ರ ಮೊದಲ ಅಭ್ಯಾಸ ಪಂದ್ಯದಲ್ಲೇ ತಮ್ಮ ಪವರ್ ತೋರಿಸಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಮನೀಶ್ ಪಾಂಡೆ ಭಾನುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಮನೀಶ್ ಪಾಂಡೆ 43 ಎಸೆತಗಳಲ್ಲಿ 67 ರನ್ ಸಿಡಿಸಿದ್ದಾರೆ. ಪಾಂಡೆ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ‘ಎ’ ತಂಡ ಸನ್ ರೈಸರ್ಸ್ ‘ಬಿ’ ತಂಡದ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಗುರುವಾರ ಇಂದೋರ್ ನಲ್ಲಿ ಅಂತ್ಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮನೀಶ್ ಪಾಂಡೆ ಕರ್ನಾಟಕ ತಂಡವನ್ನು ಮೊದಲ ಬಾರಿ ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದರು. ಪಾಂಡೆ ನಾಯಕತ್ವದಲ್ಲಿ ಸತತ 12 ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮುಡಿಗೇರಿಸಿಕೊಂಡಿತು.

ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ್ದ ಮನೀಶ್ ಪಾಂಡೆ 12 ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸಹಿತ 66.20 ಉತ್ತಮ ಸರಾಸರಿಯಲ್ಲಿ 331 ರನ್ ಗಳಿಸಿದ್ದರು. ತಮ್ಮ ಉತ್ತಮ ಫಾರ್ಮನ್ನು ಐಪಿಎಲ್ ಅಭ್ಯಾಸ ಪಂದ್ಯದಲ್ಲೂ ಪಾಂಡೆ ಮುಂದುವರಿಸಿದ್ದಾರೆ.

2016ರ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡ ಮಾರ್ಚ್ 24ರಂದು ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

ten + 4 =