ಕರ್ನಾಟಕಕ್ಕೆ ಮುಷ್ತಾಕ್ ಅಲಿ ಟ್ರೋಫಿ ಗೆದ್ದು ಕೊಟ್ಟ ಪಾಂಡೆ ಪವರ್..!

0

ಇಂದೋರ್, ಮಾರ್ಚ್ 14: ಕರ್ನಾಟಕ ತಂಡದ ಫುಲ್ ಟೈಮ್ ಕ್ಯಾಪ್ಟನ್ ಆಗಿ ಜವಾಬ್ದಾರಿ ವಹಿಸಿಕೊಂಡಿರುವ ಮನೀಶ್ ಪಾಂಡೆ, ನಾಯಕತ್ವ ವಹಿಸಿಕೊಂಡ ಮೊದಲ ವರ್ಷವೇ ದಾಖಲೆ ನಿರ್ಮಿಸಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ20 ಟೂರ್ನಿಯಲ್ಲಿ ಕರ್ನಾಟಕ ತಂಡ ಮೊದಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದು, ಮನೀಶ್ ಪಾಂಡೆ ನಾಯಕತ್ವದಲ್ಲಿ ರಾಜ್ಯ ತಂಡ ಇತಿಹಾಸ ನಿರ್ಮಿಸಿದೆ. ಪಾಂಡೆ ನಾಯಕತ್ವದಲ್ಲಿ ಕರ್ನಾಟಕ ತಂಡ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೋಲನ್ನೇ ಕಾಣದೆ ಸತತ 12 ಗೆಲುವುಗಳೊಂದಿಗೆ ಪ್ರಶಸ್ತಿ ಗೆದ್ದುಕೊಂಡಿದೆ.

ಕರ್ನಾಟಕ ತಂಡಕ್ಕೆ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದ ದಿಗ್ಗಜ ನಾಯಕ ಆರ್.ವಿನಯ್ ಕುಮಾರ್ ಕಳೆದ ವರ್ಷ ನಾಯಕತ್ವ ತ್ಯಜಿಸಿದ್ದರು. ವಿನಯ್ ಉತ್ತರಾಧಿಕಾರಿಯಾಗಿ ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಮನೀಶ್ ಪಾಂಡೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಸೋತಿದ್ದ ಕರ್ನಾಟಕ ತೀವ್ರ ನಿರಾಸೆ ಅನುಭವಿಸಿತ್ತು. ಆದರೆ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸಿಕ್ಕ ಐತಿಹಾಸಿಕ ಗೆಲುವು ಕರ್ನಾಟಕ ತಂಡದ ಆ ನಿರಾಸೆಯನ್ನು ಮರೆಸಿದೆ.

ಟೂರ್ನಿಯಲ್ಲಿ 12 ಪಂದ್ಯಗಳಿಂದ 66.20 ಸರಾಸರಿಯಲ್ಲಿ 1 ಒಂದು ಶತಕ, 1 ಅರ್ಧಶತಕದ ಸಹಿತ 331 ರನ್ ಕಲೆ ಹಾಕಿದ ಮನೀಶ್ ಪಾಂಡೆ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು.

LEAVE A REPLY

Please enter your comment!
Please enter your name here

four − two =