ಭಾರತ ‘ಎ’ ತಂಡಕ್ಕೆ ಸರಣಿ ಗೆದ್ದುಕೊಟ್ಟ ಮನೀಶ್ ಪಾಂಡೆ ಶತಕ

0

ಆಂಟಿಗಾ, ಜುಲೈ 16: ನಾಯಕ ಮನೀಶ್ ಪಾಂಡೆ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಅಷ್ಟೇ ಅಲ್ಲದೆ, ಇನ್ನೂ 2 ಪಂದ್ಯಗಳು ಬಾಕಿ ಇರುತ್ತಲೇ ಸರಣಿ ಕೈವಶ ಮಾಡಿಕೊಂಡಿದೆ.

ನಾರ್ಥ್ ಸೌಂಡ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕನೂ ಆಗಿರುವ ಮನೀಶ್ ಪಾಂಡೆ 87 ಎಸೆತಗಳಲ್ಲಿ ಅಕರ್ಷಕ 100 ರನ್ ಬಾರಿಸಿದರು. ಈ ಮನಮೋಹಕ ಇನ್ನಿಂಗ್ಸ್ನಲ್ಲಿ ಮನೀಶ್ ಪಾಂಡೆ 6 ಬೌಂಡರಿಗಳು ಮತ್ತು 5 ಸಿಕ್ಸರ್ಸ್ ಸಿಡಿಸಿದರು. ಇದು ಲಿಸ್ಟ್ ಕ್ರಿಕೆಟ್ನಲ್ಲಿ ಮನೀಶ್ ಪಾಂಡೆ ಬಾರಿಸಿದ 9ನೇ ಶತಕವಾಗಿದೆ. ಯುವ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ 81 ಎಸೆತಗಳಲ್ಲಿ 77 ರನ್ ಗಳಿಸಿದರು.

ಪಾಂಡೆ ಮತ್ತು ಗಿಲ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 295 ರನ್ ಕಲೆ ಹಾಕಿತು.

ನಂತರ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ (5/25) ಅವರ ಮಾರಕ ದಾಳಿಗೆ ತತ್ತರಿಸಿ 34.2 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟಾಗಿ 148 ರನ್ಗಳ ಹೀನಾಯ ಸೋಲು ಅನುಭವಿಸಿತು.

LEAVE A REPLY

Please enter your comment!
Please enter your name here

16 + one =