ಸನ್ ರೈಸರ್ಸ್ ಕ್ಯಾಂಪ್ ಸೇರಿಕೊಂಡ ಕರ್ನಾಟಕ ಕ್ಯಾಪ್ಟನ್ ಮನೀಶ್ ಪಾಂಡೆ

0

ಹೈದರಾಬಾದ್, ಮಾರ್ಚ್ 17: ಕರ್ನಾಟಕಕ್ಕೆ ಮೊದಲ ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಗೆದ್ದುಕೊಟ್ಟ ನಾಯಕ ಮನೀಶ್ ಪಾಂಡೆ ಐಪಿಎಲ್-12 ಟೂರ್ನಿಗೆ ಸಜ್ಜಾಗುತ್ತಿದ್ದಾರೆ.

ಇಂದೋರ್ ನಲ್ಲಿ ನಡೆದ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ನಲ್ಲಿ ಮಹಾರಾಷ್ಟ್ರ ತಂಡವನ್ನು ಸೋಲಿಸಿದ್ದ ಕರ್ನಾಟಕ ಚೊಚ್ಚಲ ಬಾರಿ ಚಾಂಪಿಯನ್ ಆಗಿತ್ತು. 

ಇಂದೋರ್ ನಿಂದ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಮನೀಶ್ ಪಾಂಡೆ ಶನಿವಾರ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ.

2016ರ ಚಾಂಪಿಯನ್ ಸನ್ ರೈಸರ್ಸ್ ತಂಡ ಮಾರ್ಚ್ 24ರಂದು ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆ ಮುಗಿಸಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಕೂಡ ಸನ್ ರೈಸರ್ಸ್ ತಂಡ ಸೇರಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

nine − 5 =