ಐಪಿಎಲ್: ಕರ್ನಾಟಕದ ರನ್ ಮಷಿನ್ ಮಯಾಂಕ್ ಸಾವಿರ ರನ್ ಸರದಾರ..!

0
File Photo: IPL/Twitter

ಕೋಲ್ಕತ್ತ, ಮಾರ್ಚ್ 27: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಕರ್ನಾಟಕದ ರನ್ ಮಷಿನ್ ಮಯಾಂಕ್ ಅಗರ್ವಾಲ್ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಐಪಿಎಲ್ ವೃತ್ತಿಜೀವನದಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ್ದಾರೆ.

219 ರನ್ ಚೇಸಿಂಗ್ ಸಂದರ್ಭದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದು ಅಬ್ಬರಿಸಿದ ಮಯಾಂಕ್ ಕೇವಲ 28 ಎಸೆತಗಳಲ್ಲಿ

ಅರ್ಧಶತಕ ಸಿಡಿಸಿದರು. 34 ಎಸೆತಗಳನ್ನೆದುರಿಸಿದ ಬಲಗೈ ಬ್ಯಾಟ್ಸ್ ಮನ್ ಮಯಾಂಕ್ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಔಟಾದರು. 44 ರನ್ ಗಳಿಸಿದ್ದಾಗ ಐಪಿಎಲ್ ವೃತ್ತಿಜೀವನದಲ್ಲಿ ಮಯಾಂಕ್ ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು.

ಇದುವರೆಗೆ 66 ಪಂದ್ಯಗಳನ್ನಾಡಿರುವ 27 ವರ್ಷದ ಮಯಾಂಕ್ ಅಗರ್ವಾಲ್ 812 ಎಸೆತಳನ್ನೆದುರಿಸಿ 1014 ರನ್ ಗಳಿಸಿದ್ದಾಗೆ. ಇದರಲ್ಲಿ 98 ಬೌಂಡರಿಗಳು ಮತ್ತು 41 ಸಿಕ್ಸರ್ಸ್ ಸೇರಿವೆ. ಭಾರತ ಪರ ಟೆಸ್ಟ್ ಆಡಿರುವ ಮಯಾಂಕ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಗಳ ಪರ ಆಡಿದ್ದರು.

LEAVE A REPLY

Please enter your comment!
Please enter your name here

eight − 3 =