ಗ್ಲೌಸ್ನಲ್ಲಿ ಆರ್ಮಿ ಲಾಂಛನ: ಐಸಿಸಿ ಶಾಕ್, ಧೋನಿಗೆ ನಿರ್ಮಲಾ ಸೀತಾರಾಮನ್ ಬೆಂಬಲ

0

ಲಂಡನ್, ಜೂನ್ 6: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಭಾರತ ತಂಡದ ಮಾಜಿ ನಾಯಕ ಹಾಗೂ ಲೆಫ್ಟಿನೆಂಟ್ ಕರ್ನಲ್ ಎಂ.ಎಸ್ ಧೋನಿ ಅವರಿಗೆ ಐಸಿಸಿ ಶಾಕ್ ನೀಡಿದೆ.

ಧೋನಿ ಅವರು ಬಳಸುವ ವಿಕೆಟ್ ಕೀಪಿಂಗ್ ಗ್ಲೌಸ್ ನಲ್ಲಿ ಭಾರತೀಯ ಸೇನೆಯ ಲಾಂಛನವಿದೆ. ಇಂಡಿಯನ್ ಆರ್ಮಿನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ, ಆರ್ಮಿ ಲಾಂಛನವಿರುವ ಗ್ಲೌಸ್ ಬಳಸುತ್ತಾರೆ. ಇದು ಐಸಿಸಿ ಕಣ್ಣು ಕುಕ್ಕುವಂತೆ ಮಾಡಿದ್ದು ಗ್ಲೌಸ್ ನಿಂದ ಆರ್ಮಿ ಲಾಂಛನವನ್ನು ತೆಗೆಯಲು ಧೋನಿ ಅವರಿಗೆ ಸೂಚಿಸುವಂತೆ ಬಿಸಿಸಿಐಗೆ ಐಸಿಸಿ ಸೂಚಿಸಿದೆ.

ಆದರೆ ಐಸಿಸಿಯ ಈ ಸೂಚನೆಗೆ ಕೇಂದ್ರ ಸರ್ಕಾರದ ಮಾಜಿ ರಕ್ಷಣಾ ಸಚಿವೆ ಹಾಗೂ ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರೋಧ ವ್ಯಕ್ತಪಡಿಸಿ ಧೋನಿಗೆ ಬೆಂಬಲ ಸೂಚಿಸಿದ್ದಾರೆ.

’’ಧೋನಿ, ನೀವು ಲೆಫ್ಟಿನೆಂಟ್ ಕರ್ನಲ್. ನೀವು ಬಳಸುವ ಗ್ಲೌಸ್ ನಲ್ಲಿರುವ ಲಾಂಛನ ಬಲಿದಾನದ ಸಂಕೇತ. ಯಾವುದೇ ಕಾರಣಕ್ಕೂ ಅದನ್ನು ತೆಗೆಯಬೇಡಿ. ಇಡೀ ದೇಶ ನಿಮ್ಮೊಂದಿಗಿದೆ’’ ಎಂದು ನಿರ್ಮಲಾ ಸಿತಾರಾಮನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

18 + seventeen =