300, 400, 500.. ಅಪರೂಪದ ದಾಖಲೆ ಬರೆದ ಧೋನಿ..!

0
PC: BCCI/twitter

ನಾಗ್ಪುರ, ಮಾರ್ಚ್ 5: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಭಾರತ ತಂಡದ 300, 400 ಹಾಗೂ 500ನೇ ಏಕದಿನ ಗೆಲುವುಗಳ ಭಾಗವಾಗಿದ್ದಾರೆ. ವಿಶೇಷ ಎಂದರೆ ಈ ಮೂರೂ ಐತಿಹಾಸಿಕ ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದೆ.

ಭಾರತ ತಂಡ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ತನ್ನ 300ನೇ ಏಕದಿನ ಗೆಲುವು ದಾಖಲಿಸಿತ್ತು. 400ನೇ ಗೆಲುವು ದಾಖಲಿಸಿದ್ದಾಗ ಸ್ವತಃ ಧೋನಿ ಅವರೇ ತಂಡದ ನಾಯಕರಾಗಿದ್ದರು. ಇದೀಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತನ್ನ 500ನೇ ಗೆಲುವು ದಾಖಲಿಸಿದ್ದು, ಈ ಪಂದ್ಯದಲ್ಲೂ ಧೋನಿ ಆಡಿದ್ದಾರೆ. ದುರಾದೃಷ್ಠವಶಾತ್ ಈ ಸ್ಮರಣೀಯ ಪಂದ್ಯದಲ್ಲಿ ಧೋನಿ ಶೂನ್ಯಕ್ಕೆ ಔಟಾಗಿದ್ದರು.

ಇದನ್ನೂ ಓದಿ: ಧೋನಿಯನ್ನು ಮೈದಾನದಲ್ಲೇ ಅಟ್ಟಿಸಿಕೊಂಡು ಹೋದ ಅಭಿಮಾನಿ.. ಧೋನಿ ಮಾಡಿದ್ದೇನು ಗೊತ್ತಾ..?

ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ 8 ರನ್ ಗಳ ರೋಚಕ ಗೆಲುವು ಸಾಧಿಸಿ 500ನೇ ಗೆಲುವಿನ ಸಂಭ್ರಮವನ್ನಾಚರಿಸಿತು. ಅಲ್ಲದೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಂಪಾದಿಸಿತು.

ಇದನ್ನೂ ಓದಿ: ಭಾರತಕ್ಕೆ 500ನೇ ಏಕದಿನ ವಿಜಯ ತಂದ ವಿಜಯ್ ಶಂಕರ್..!

ಭಾರತ ಪರ 340 ಏಕದಿನ ಪಂದ್ಯಗಳನ್ನಾಡಿರುವ 37 ವರ್ಷದ ಧೋನಿ 10 ಶತಕ ಹಾಗೂ 71 ಅರ್ಧಶತಕಗಳ ಸಹಿತ 10,474 ರನ್ ಗಳಿಸಿದ್ದಾರೆ. ಅಲ್ಲದೆ 314 ಕ್ಯಾಚ್ ಹಾಗೂ 120 ಸ್ಟಂಪಿಂಗ್ ಸಾಧನೆ ಮಾಡಿದ್ದಾರೆ. 804 ಬೌಂಡರಿಗಳು ಮತ್ತು 223 ಸಿಕ್ಸರ್ಸ್ ಕೂಡ ಸಿಡಿಸಿದ್ದಾರೆ.

LEAVE A REPLY

Please enter your comment!
Please enter your name here

twenty + 8 =