ಅಜ್ಜಿಯನ್ನು ನೋಡಿ ಓಡೋಡಿ ಬಂದು ಸೆಲ್ಫಿ ತೆಗೆದುಕೊಂಡ ಧೋನಿ..! ಇಲ್ಲಿದೆ ವೀಡಿಯೊ..

0
PC: Whistle Podu Army/Twitter

ಚೆನ್ನೈ, ಏಪ್ರಿಲ್ 04: ಟೀಮ್ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಸರಳತೆಗೆ ಹೆಸರಾದವರು. ಐಪಿಎಲ್-12 ಟೂರ್ನಿಯ ವೇಳೆ ಧೋನಿ ಮತ್ತೊಮ್ಮೆ ತಮ್ಮ ಸರಳ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಸೋತ ನಂತರ ಧೋನಿ ಭೇಟಿಗಾಗಿ ಅಪರೂಪದ ಅತಿಥಿಯೊಬ್ಬರು ಮೈದಾನದಲ್ಲಿ ಕಾದು ಕುಳಿತಿದ್ದರು. ಧೋನಿ ಭೇಟಿಗಾಗಿ ಕಾದಿದ್ದ ಅಜ್ಜಿಯೊಬ್ಬರು ”ನಾನು ಇಲ್ಲಿರುವುದು ಧೋನಿಗಾಗಿ ಮಾತ್ರ” ಎಂಬ ಭಿತ್ತಿ ಪತ್ರವನ್ನು ಹಿಡಿದು ನಿಂತಿದ್ದರು. ಡ್ರೆಸ್ಸಿಂಗ್ ರೂಮ್ ನಿಂದ ಇದನ್ನು ಗಮನಿಸಿದ ಧೋನಿ ನೇರವಾಗಿ ಆ ಅಜ್ಜಿಯ ಬಳಿ ಬಂದು ಸೆಲ್ಫಿ ತೆಗೆದುಕೊಂಡರು. ಅಷ್ಟೇ ಅಲ್ಲ, ಆಟೋಗ್ರಾಫ್ ನೀಡ ಅಜ್ಜಿಯ ಕೈ ಹಿಡಿದು ಆತ್ಮೀಯವಾಗಿ ಮಾತನಾಡಿದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಟೂರ್ನಿಯಲ್ಲಿ ಮೊದಲ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

7 − 1 =