ತಾಯಿಯ ಸಾವಿನ ನೋವಿನಲ್ಲೇ ಆಡಿ ಮುಂಬೈಗೆ ಪಂದ್ಯ ಗೆಲ್ಲಿಸಿದ ಬೌಲರ್..!

0

ಇಂದೋರ್, ಮಾರ್ಚ್ 9: ಮುಂಬೈ ತಂಡದ ಯುವ ಮಧ್ಯಮ ವೇಗದ ಬೌಲರ್ ತುಷಾರ್ ದೇಶಪಾಂಡೆ ಮಂಗಳವಾರವಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ತಾಯಿಯ ಸಾವಿನ ನೋವಿನಲ್ಲೇ ಆಡಿದ ತುಷಾರ್ ದೇಶಪಾಂಡೆ ಇಂದೋರ್ ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ದೆಹಲಿ ವಿರುದ್ಧ ಮುಂಬೈಗೆ ಜಯ ತಂದುಕೊಟ್ಟಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ತುಷಾರ್ ದೇಶಪಾಂಡೆ ಅವರ ತಾಯಿ ಮಂಗಳವಾರ ಸಾವಿಗೀಡಾಗಿದ್ದರು. ಶನಿವಾರ ದೆಹಲಿ ವಿರುದ್ಧ ಕಣಕ್ಕಿಳಿದ ಬಲಗೈ ಮಧ್ಯಮವೇಗಿ ತುಷಾರ್ ದೆಹಲಿ ತಂಡದ ನಾಯಕ ನಿತೀಶ್ ರಾಣಾ, ಉನ್ಮುಕ್ತ್ ಚಾಂದ್, ಸುಭೋದ್ ಭಾಟಿ ಮತ್ತು ಲಲಿತ್ ಯಾದವ್ ವಿಕೆಟ್ ಪಡೆದರು. 4 ಓವರ್ ಬೌಲಿಂಗ್ ಮಾಡಿದ ತುಷಾರ್ ದೇಶಪಾಂಡೆ 19 ರನ್ನಿತ್ತು 4 ವಿಕೆಟ್ ಕಬಳಿಸಿದರು. ಈ ಪಂದ್ಯವನ್ನು ಮುಂಬೈ 8 ವಿಕೆಟ್ ಗಳಿಂದ ಗೆದ್ದುಕೊಂಡಿತು. ದೆಹಲಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದರೆ, ಟಾರ್ಗೆಟ್ ಚೇಸ್ ಮಾಡಿದ ಮುಂಬೈ 19 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಗೆಲುವು ದಾಖಲಿಸಿತು.

ಪಂದ್ಯದ ನಂತರ ಮಾತನಾಡಿದ ತುಷಾರ್ ದೇಶಪಾಂಡೆ ‘’ಬೇರೆ ಎಲ್ಲಾ ಮಕ್ಕಳಂತೆ ನಾನೂ ಕೂಡ ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದೆ. ನಾನು ಸದಾ ಕ್ರಿಕೆಟ್ ಆಡುತ್ತಲೇ ಇರಬೇಕೆಂಬುದು ಆಕೆಯ ಆಸೆಯಾಗಿತ್ತು’’ ಎಂದಿದ್ದಾರೆ.

LEAVE A REPLY

Please enter your comment!
Please enter your name here

three × 1 =