ಗಂಗೂಲಿ-ಪಾಂಟಿಂಗ್ ಬಗ್ಗೆ ಜ್ಯೂನಿಯರ್ ಸಚಿನ್ ಹೇಳಿದ್ದೇನು..?

0
PC: IndianPremierLeague/Twitter

ಮುಂಬೈ, ಮಾರ್ಚ್ 24: ಜ್ಯೂನಿಯರ್ ಸಚಿನ್ ತೆಂಡೂಲ್ಕರ್ ಖ್ಯಾತಿಯ ಪೃಥ್ವಿ ಶಾ, ಐಪಿಎಲ್-12 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಮುಂಬೈನವರೇ ಆದ ಪೃಥ್ವಿ ಶಾ ತಮ್ಮ ಕ್ರಿಕೆಟ್ ಜೀವನದ ಬಹುಪಾಲು ಸಮಯವನ್ನು ವಾಂಖೆಡೆ ಕ್ರೀಡಾಂಗಣದಲ್ಲೇ ಕಳೆದಿದ್ದು, ಮುಂಬೈ ವಿರುದ್ಧದ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಧಾನ ಕೋಚ್ ಮತ್ತು ಸಲಹೆಗಾರ ಸೌರವ್ ಗಂಗೂಲಿ ಅವರಿಂದ ಸಾಕಷ್ಟು ಕಲಿಯುತ್ತಿರುವುದಾಗಿ 19 ವರ್ಷದ ಬಲಗೈ ಓಪನರ್ ಪೃಥ್ವಿ ಶಾ ಹೇಳಿದ್ದಾರೆ.

ಐಪಿಎಲ್ ವೆಬ್ ಸೈಟ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡರುವ ಪೃಥ್ವಿ ಶಾ, ”ರಿಕಿ ಸರ್ ಮತ್ತು ಸೌರವ್ ಸರ್ ಕ್ರಿಕೆಟ್ ಕಂಡ ದಿಗ್ಗಜರು. 15 ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದವರು. ಅವರಿಗೆ ಸಾಕಷ್ಟು ಅನುಭವವಿದೆ. ವಿಭಿನ್ನ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕೆಂಬುದು ಅವರಿಗೆ ತಿಳಿದಿದೆ. ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ” ಎಂದಿದ್ದಾರೆ.

ಪೃಥ್ವಿ ಶಾ ಅವರ ಸಂದರ್ಶನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

https://www.iplt20.com/video/152381

LEAVE A REPLY

Please enter your comment!
Please enter your name here

20 − 11 =