ಪ್ರೊ ಕಬಡ್ಡಿ: ಕನ್ನಡಿಗನ ಗರಡಿಯಲ್ಲಿ ಪಳಗಿದ ಬೆಂಗಾಲ್ ಚಾಂಪಿಯನ್ಸ್

0

ಅಹ್ಮದಾಬಾದ್, ಅಕ್ಟೋಬರ್ 19: ಭಾರತ ತಂಡದ ಮಾಜಿ ನಾಯಕ, ಕನ್ನಡಿಗ ಬಿ.ಸಿ ರಮೇಶ್ ಗರಡಿಯಲ್ಲಿ ಪಳಗಿದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್-7 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಅಹ್ಮದಾಬಾದ್’ನ ಟ್ರಾನ್ಸ್’ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ದಬಾಂಗ್ ಡೆಲ್ಲಿ ಕೆ.ಸಿ ತಂಡವನ್ನು 39-34 ಅಂಕಗಳಿಂದ ಸೋಲಿಸಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಸ್ಟಾರ್ ರೇಡರ್ ಮಣಿಂದರ್ ಸಿಂಗ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಾಲ್ ಇರಾನ್ ಆಟಗಾರ ಮೊಹಮ್ಮದ್ ನಬಿ ಭಕ್ಷ್, ಕರ್ನಾಟಕದ ಆಟಗಾರರಾದ ಸುಖೇಶ್ ಹೆಗ್ಡೆ ಮತ್ತು ಜೀವಾ ಕುಮಾರ್ ಅವರ ಅಮೋಘ ಆಟದ ನೆರವಿನಿಂದ ಪ್ರಶಸ್ತಿ ಗೆದ್ದುಕೊಂಡಿತು.

ಕಳೆದ ವರ್ಷದ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡದ ಸಹಾಯಕ ಕೋಚ್ ಆಗಿದ್ದ ಬಿ.ಸಿ ರಮೇಶ್ ಈ ಬಾರಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು 346 ರೇಡ್ ಪಾಯಿಂಟ್ಸ್ ಕಲೆ ಹಾಕಿದ ಬೆಂಗಳೂರು ಬುಲ್ಸ್ ತಂಡದ ಪವನ್ ಸೆಹ್ರಾವತ್ ಸೀಸನ್-7ರ ಬೆಸ್ಟ್ ರೇಡರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

LEAVE A REPLY

Please enter your comment!
Please enter your name here

3 × 1 =