26 ಎಸೆತ… 4 ಸಿಕ್ಸರ್ಸ್… 47 ರನ್.. ಚಿನ್ನಸ್ವಾಮಿಯಲ್ಲಿ ರಾಹುಲ್ ಧಮಾಕ..!

0

ಕನ್ನಡಿಗ ಕೆ.ಎಲ್ ರಾಹುಲ್ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನವಿತ್ತಿದ್ದಾರೆ.

ಶಿಖರ್ ಧವನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ಕೇವಲ 26 ಎಸೆತಗಳಲ್ಲಿ 3 ಬೌಂಡರಿಗಳು ಮತ್ತು 4 ಸಿಕ್ಸರ್ಸ್ ನೆರವಿನಿಂದ 47 ರನ್ ಗಳಿಸಿ ಔಟಾದರು. ಇದರೊಂದಿಗೆ ಸರಣಿಯಲ್ಲಿ ಸತತ 2ನೇ ಅರ್ಧಶತಕದಿಂದ ವಂಚಿತರಾದರು. ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ರಾಹುಲ್ 36 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು.

ರಾಹುಲ್ ಅವರ ಸ್ಫೋಟಕ ಆಟದ ಜೊತೆಗೆ ನಾಯಕ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 6 ಸಿಕ್ಸರ್ಸ್ ನೆರವಿನಿಂದ ಸಿಡಿಸಿದ ಅಜೇಯ 72 ರನ್ ಮತ್ತು ಮಾಜಿ ನಾಯಕ ಎಂ.ಎಸಿ ಧೋನಿ 23 ಎಸೆತಗಳಲ್ಲಿ 3 ಬೌಂಡರಿಗಳು ಮತ್ತು 3 ಸಿಕ್ಸರ್ಸ್ ನೆರವಿನಿಂದ ಗಳಿಸಿದ 40 ರನ್ ಗಳಿಂದಾಗಿ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತು.

LEAVE A REPLY

Please enter your comment!
Please enter your name here

fourteen − one =