ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ‘ದಿ ಗ್ರೇಟ್ ವಾಲ್’ ರಾಹುಲ್ ದ್ರಾವಿಡ್ ಕೋಚ್..?

0
PC: twitter

ಬೆಂಗಳೂರು, ಮಾರ್ಚ್ 23: ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ ಸಿ ಎ)ಯ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಶಿಫಾರಸು ಮಾಡಿದೆ.

46 ವರ್ಷದ ದ್ರಾವಿಡ್ ಈಗ ಭಾರತ ‘ಎ’ ಹಾಗೂ ಭಾರತ U-19 ತಂಡಗಳ ಕೋಚ್ ಆಗಿದ್ದಾರೆ. ಇದೀಗ ಬೆಂಗಳೂರಿನಲ್ಲಿರುವ ಎನ್ ಸಿ ಎ ಹೆಡ್ ಕೋಚ್ ಆಗಿ ದ್ರಾವಿಡ್ ನೇಮಕಗೊಳ್ಳುವ ಸಾಧ್ಯತೆಯಿದೆ. ದ್ರಾವಿಡ್ ಒಪ್ಪಿಕೊಂಡರೆ ಎನ್ ಸಿ ಎ ಕೋಚ್ ಆಗುವುದು ಖಚಿತ.

ಭಾರತ ‘ಎ’ ಹಾಗೂ ಭಾರತ U-19 ತಂಡಗಳ ಕೋಚ್ ಆಗಿ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುತ್ತಿರುವ ದ್ರಾವಿಡ್, ಭಾರತೀಯ ಕ್ರಿಕೆಟ್ ಗೆ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ್ದ ಭಾರತದ 19 ವರ್ಷದೊಳಗಿನವರ ತಂಡ ಕಳೆದ ವರ್ಷ ನ್ಯೂಜಿಲೆಂಡ್ ನಲ್ಲಿ ನಡೆದ ಐಸಿಸಿ U-19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.

LEAVE A REPLY

Please enter your comment!
Please enter your name here

five × 1 =