BTR ಶೀಲ್ಡ್ ಟ್ರೋಫಿ: 5 ಪಂದ್ಯ.. 681 ರನ್.. ದ್ರಾವಿಡ್ ಮಗನ ಭರ್ಜರಿ ಬ್ಯಾಟಿಂಗ್..!

0

ಬೆಂಗಳೂರು, ಫೆಬ್ರವರಿ 28: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ತಂದೆಗೆ ತಕ್ಕ ಮಗ. ದ್ರಾವಿಡ್ ಅವರ ಹಿರಿಯ ಪುತ್ರನಾಗಿರುವ ಸಮಿತ್, ಕೆಎಸ್”ಸಿಎ ಬಿಟಿಆರ್ ಶೀಲ್ಡ್ ಕ್ರಿಕೆಟ್ ಏಕದಿನ ಟೂರ್ನಿಯಲ್ಲಿ ಅಕ್ಷರಶಃ ರನ್ ಹೊಳೆ ಹರಿಸುತ್ತಿದ್ದಾರೆ.

ಬಿಟಿಆರ್ ಶೀಲ್ಡ್ ಅಂಡರ್-14 ಗ್ರೂಪ್ 1, ಡಿವಿಜನ್ II ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿರುವ ಸಮಿತ್ ದ್ರಾವಿಡ್, ಇಲ್ಲಿಯವರೆಗೆ ಆಡಿರುವ 5 ಪಂದ್ಯಗಳಲ್ಲಿ ಒಂದು ದ್ವಿಶತಕ ಹಾಗೂ ಒಂದು ಶತಕ ಸಹಿತ 681 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಬೌಲಿಂಗ್”ನಲ್ಲೂ ಮಿಂಚಿ 7 ವಿಕೆಟ್ ಕಬಳಿಸಿದ್ದಾರೆ.

ಅದ್ಭುತ ಆಲ್ರೌಂಡ್ ಆಟದ ಮೂಲಕ ಸಮಿತ್ ದ್ರಾವಿಡ್, ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್ ತಂಡ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಲು ಕಾರಣರಾಗಿದ್ದಾರೆ. ಇತ್ತೀಚೆಗೆ ನಡೆದ ಕೆಎಸ್’ಸಿಎ ಅಂಡರ್-14 ಇಂಟರ್ ಝೋನಲ್ ಟೂರ್ನಿಯಲ್ಲೂ ಮಿಂಚಿದ್ದ 14 ವರ್ಷದ ಸಮಿತ್ ದ್ರಾವಿಡ್, ಉಪಾಧ್ಯಕ್ಷರ ಇಲೆವೆನ್ ತಂಡದ ನಾಯಕತ್ವ ವಹಿಸಿದ್ದರು. ಅಲ್ಲದೆ ಧಾರವಾಡ ಝೋನ್ ವಿರುದ್ಧದ ಪಂದ್ಯದಲ್ಲಿ 295 ರನ್ ಗಳಿಸಿ ಗಮನ ಸೆಳೆದಿದ್ದರು.

LEAVE A REPLY

Please enter your comment!
Please enter your name here

three × 4 =