ಶಿರಗುಪ್ಪಿ ಅಕಾಡೆಮಿಯಲ್ಲಿ ಕ್ರಿಕೆಟ್ ಪಾಠ ಹೇಳಿ ಕೊಟ್ಟ ದ್ರಾವಿಡ್..!

0

ಹುಬ್ಬಳ್ಳಿ, ಜೂನ್ 13: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಖ್ಯಾತಿಯ ರಾಹುಲ್ ದ್ರಾವಿಡ್ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುವುದರಲ್ಲಿ ಸದಾ ಮುಂದು.

ಸಮಯ ಸಿಕ್ಕಾಗಲೆಲ್ಲಾ ಕ್ರಿಕೆಟ್ ಅನುಭವವನ್ನು ದ್ರಾವಿಡ್ ಯುವ ಕ್ರಿಕೆಟಿಗರೊಂದಿಗೆ ಹಂಚಿಕೊಳ್ಳುತ್ತಿರುವತ್ತಾರೆ. ಇದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಕರ್ನಾಟಕ ರಣಜಿ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸೋಮಶೇಖರ್ ಶಿರಗುಪ್ಪಿ ಹುಬ್ಬಳ್ಳಿಯಲ್ಲಿ ತಮ್ಮ ಮಗಳ ಹೆಸರಿನಲ್ಲಿ ನಿರ್ಮಿಸಿರುವ ‘ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ’ಗೆ ದ್ರಾವಿಡ್ ಭೇಟಿ ನೀಡಿದ್ದಾರೆ.

ಭಾರತ ‘ಎ’ ತಂಡದ ಕೋಚ್ ಕೂಡ ಆಗಿರುವ ದ್ರಾವಿಡ್, ಸದ್ಯ ಭಾರತ ‘ಎ’ ತಂಡ ಹುಬ್ಬಳ್ಳಿಯಲ್ಲಿ ಶ್ರೀಲಂಕಾ ‘ಎ’ ತಂಡದ ವಿರುದ್ಧ ಏಕದಿನ ಸರಣಿಯನ್ನಾಡುತ್ತಿದೆ. ಗುರುವಾರ ನಡೆದ 3ನೇ ಪಂದ್ಯದ ನಂತರ ಹುಬ್ಬಳ್ಳಿಯ ವಿಮಾನನಿಲ್ದಾಣ ರಸ್ತೆಯಲ್ಲಿರುವ ‘ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ’ಗೆ ದ್ರಾವಿಡ್ ಭೇಟಿ ನೀಡಿದರು. ಸೋಮಶೇಖರ್ ಶಿರಗುಪ್ಪಿ ಅವರ ವಿಶೇಷ ಆಹ್ವಾನದ ಮೇರೆಗೆ ಆಗಮಿಸಿದ ದ್ರಾವಿಡ್ ಅಲ್ಲಿದ್ದ ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟರು.

ಅಷ್ಟೇ ಅಲ್ಲದೆ ಸೋಮಶೇಖರ್ ಶಿರಗುಪ್ಪಿ ಅವರ ಶ್ರಮದಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕ್ರಿಕೆಟ್ ಅಕಾಡೆಮಿಯ ಬಗ್ಗೆ, ಅಲ್ಲಿನ ಸೌಲಭ್ಯಗಳ ಬಗ್ಗೆ ದ್ರಾವಿಡ್ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

one − 1 =