ವಿಜಯ್ ಹಜಾರೆ ಟ್ರೋಫಿ: ರಾಹುಲ್ ಶತಕದ ಆರ್ಭಟಕ್ಕೆ ಕೊಚ್ಚಿ ಹೋದ ಕೇರಳ

0
PC: Twitter

ಬೆಂಗಳೂರು, ಸಪ್ಟೆಂಬರ್ 28: ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕೇರಳ ವಿರುದ್ಧ ಅಮೋಘ ಶತಕ ಬಾರಿಸಿದ್ದಾರೆ. ಈ ಮೂಲಕ ರಾಹುಲ್ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಹುಲ್ ಶತಕದ ನೆರವಿನಿಂದ ಕರ್ನಾಟಕ ತಂಡ ಕೇರಳ ವಿರುದ್ಧ 60 ರನ್’ಗಳ ಭರ್ಜರಿ ಜಯದೊಂದಿಗೆ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 49.5 ಓವರ್’ಗಳಲ್ಲಿ 294 ರನ್’ಗಳಿಗೆ ಆಲೌಟಾಯಿತು. ನಂತರ ಗುರಿ ಬೆನ್ನಟ್ಟಿದ ರಾಬಿನ್ ಉತ್ತಪ್ಪ ನಾಯಕತ್ವದ ಕೇರಳ 45.3 ಓವರ್’ಗಳಲ್ಲಿ 234 ರನ್’ಗಳಿಗೆ ಆಲೌಟಾಯಿತು.

ಕರ್ನಾಟಕ ಪರ ಬ್ಯಾಟಿಂಗ್ ಆರಂಭಿಸಿದ ಕೆ.ಎಲ್ ರಾಹುಲ್ ಮತ್ತು ದೇವದತ್ ಪಡಿಕಲ್ ಜೋಡಿ 5ನೇ ಓವರ್’ನಲ್ಲಿ ಬೇರ್ಪಟ್ಟಿತು. ಕಳೆದ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಅರ್ಧಶತಕ ಬಾರಿಸಿದ್ದ ಪಡಿಕಲ್ ಇಲ್ಲಿ ಕೇವಲ 2 ರನ್ ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿಂದ ವಿಕೆಟ್ ಕೀಪರ್ ಕೆ.ವಿ ಸಿದ್ಧಾರ್ಥ್(7) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಕರ್ನಾಟಕ ತಂಡ 30 ರನ್ನಿಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಜೊತೆಯಾದ ಉಪನಾಯಕ ರಾಹುಲ್ ಮತ್ತು ನಾಯಕ ಮನೀಶ್ ಪಾಂಡೆ 3ನೇ ವಿಕೆಟ್”ಗೆ 84 ರನ್ ಸೇರಿಸಿದರು. ಬಿರುಸಿನ ಆಟವಾಡಿದ ಪಾಂಡೆ 51 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 2 ಸಿಕ್ಸರ್ಸ್ ನೆರವಿನಿಂದ 50 ರನ್ ಗಳಿಸಿ ಔಟಾದರು. ಇದು ಟೂರ್ನಿಯಲ್ಲಿ ಮನೀಶ್ ಪಾಂಡೆ ಗಳಿಸಿದ ಸತತ 2ನೇ ಅರ್ಧಶತಕ.

ಮತ್ತೊಂದೆಡೆ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರಾಹುಲ್ 108 ಎಸೆತಗಳಲ್ಲಿ ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ತಮ್ಮ 6ನೇ ಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ ರಾಹುಲ್ 122 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ಸ್ ನೆರವಿನಿಂದ ಸ್ಫೋಟಕ 131 ರನ್ ಸಿಡಿಸಿದರು.

ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಕೇವಲ 29 ರನ್ ಗಳಿಸಿ ಔಟಾಗಿದ್ದರು.

Brief scores:  Karnataka: 294 all out in 49.5 overs (KL Rahul 131, Manish Pandey 50, Shreyas Gopal 31, Sandeep Warrier 2/46, Basil Thampi 3/70, KM Asif 3/59, Vinoop Manoharan 2/55) beat Kerala: Vishnu Vinod 104, Sanju Samson 67, Sachin Baby 26, Abhimanyu Mithun 2/32, Ronit More 3/42) by 60 runs

LEAVE A REPLY

Please enter your comment!
Please enter your name here

2 × 1 =