ಮೊಹಾಲಿ ಏಕದಿನ ಪಂದ್ಯ: ಕನ್ನಡಿಗ ರಾಹುಲ್ ಆಡ್ತಾರಾ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ…

0

ಮೊಹಾಲಿ, ಮಾರ್ಚ್ 9: ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಆಡುವುದು ಖಚಿತವಾಗಿದೆ.

ಸರಣಿಯ ಮೊದಲ ಮೂರೂ ಪಂದ್ಯಗಳಲ್ಲಿ 0, 21, 1 ರನ್ ಗಳಿಸಿ ಭಾರೀ ವೈಫಲ್ಯ ಎದುರಿಸಿರುವ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ 4ನೇ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳುವುದು ಖಚಿತ. ಶಿಖರ್ ಧವನ್ ಬದಲು ರಾಹುಲ್ ಆಡಲಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಮಿಂಚಿದ್ದ ರಾಹುಲ್ 50(36 ಎಸೆತ) ಮತ್ತು 47(26 ಎಸೆತ) ರನ್ ಗಳಿಸಿದ್ದರು. ಉತ್ತಮ ಫಾರ್ಮ್ ನಲ್ಲಿರುವ ರಾಹುಲ್ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರಂಭಿಕನಾಗಿ 56ರ ಉನ್ನತ ಸರಾಸರಿ ಹೊಂದಿದ್ದಾರೆ. 

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೊನೆಯ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ಆಡಲಿದ್ದಾರೆ.

LEAVE A REPLY

Please enter your comment!
Please enter your name here

eighteen + fourteen =