ಟಿ20 ranking: ಟಾಪ್-10ನಲ್ಲಿ ಕಂಬ್ಯಾಕ್ ಹೀರೊ ಕೆ.ಎಲ್ ರಾಹುಲ್

0
KL Rahul scored 90. PC: BCCI/twitter

ಭಾರತ ತಂಡಕ್ಕೆ ಭರ್ಜರಿ ಕಂಬ್ಯಾಕ್ ಮಾಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಗುರುವಾರ ಐಸಿಸಿ ಬಿಡುಗಡೆಗೊಳಿಸಿದ ಬ್ಯಾಟಿಂಗ್ ranking ಪಟ್ಟಿಯಲ್ಲಿ ರಾಹುಲ್ 6ನೇ ಸ್ಥಾನ ಪಡೆದಿದ್ದು, ಟಾಪ್-10ನಲ್ಲಿರುವ ಏಕೈಕ ಭಾರತೀಯನಾಗಿದ್ದಾರೆ. ಒಟ್ಟು 726 ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು.

ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20ಯಲ್ಲಿ 36 ಎಸೆತಗಲಲ್ಲಿ 50 ರನ್ ಸಿಡಿಸಿದ್ದ ರಾಹುಲ್, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ20ಯಲ್ಲಿ 26 ಎಸೆತಗಳಲ್ಲಿ ನಾಲ್ಕು ಸಿಕ್ಸರ್ಸ್ ನೆರವಿನಿಂದ 47 ರನ್ ಬಾರಿಸಿದ್ದರು.

26 ವರ್ಷದ ರಾಹುಲ್ ಭಾರತ ಪರ ಇಲ್ಲಿಯವರೆಗೆ 27 ಟಿ20 ಪಂದ್ಯಗಳನ್ನಾಡಿದ್ದು, 43.95ರ ಉತ್ತಮ ಸರಾಸರಿಯಲ್ಲಿ 2 ಶತಕಗಳು ಮತ್ತು 5 ಅರ್ಧಶತಕಗಳ ಸಹಿತ 879 ರನ್ ಗಳಿಸಿದ್ದಾರೆ. ಇದರಲ್ಲಿ ಒಟ್ಟು 76 ಬೌಂಡರಿಗಳು ಮತ್ತು 41 ಸಿಕ್ಸರ್ಸ್ ಒಳಗೊಂಡಿವೆ.

LEAVE A REPLY

Please enter your comment!
Please enter your name here

7 − 1 =