ರಣಜಿ ಸೆಮಿಫೈನಲ್: ಕರ್ನಾಟಕ ವಿರುದ್ಧ ಮೋಸದಾಟವಾಡಿದ್ದಕ್ಕೆ ಪತ್ನಿಯೇ ಬೈದಿದ್ದಳು..!

0

ಬೆಂಗಳೂರು, ಜೂನ್ 11: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿಯಲ್ಲಿ ನಡೆದ ಕಳೆದ ಸಾಲಿನ ರಣಜಿ ಸೆಮಿಫೈನಲ್ ಪಂದ್ಯವನ್ನು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ಯಾಕಂದ್ರೆ ಆ ಪಂದ್ಯದಲ್ಲಿ ಕರ್ನಾಟಕ ತಂಡ ತವರು ನೆಲದಲ್ಲೇ ಸೌರಾಷ್ಟ್ರ ವಿರುದ್ಧ 5 ವಿಕೆಟ್ ಗಳ ಸೋಲು ಕಂಡು ಆಘಾತ ಅನುಭವಿಸಿತ್ತು.

ಆ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರದ ಆಟಗಾರ ಚೇತೇಶ್ವರ್ ಪೂಜಾರ 2ನೇ ಇನ್ನಿಂಗ್ಸ್ ನಲ್ಲಿ ಅಜೇಯ 131 ರನ್ ಬಾರಿಸಿ ಸೌರಾಷ್ಟ್ರಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಮೊದಲೇ ಪೂಜಾರ ಔಟಾಗಿದ್ದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಕೇವಲ 1 ರನ್ ಗಳಿಸಿದ್ದಾಗ ವೇಗಿ ಅಭಿಮನ್ಯು ಮಿಥುನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿದ್ದ ಪೂಜಾರ, 2ನೇ ಇನ್ನಿಂಗ್ಸ್ ನಲ್ಲಿ 45 ರನ್ ಗಳಿಸಿದ್ದಾಗ ಮಧ್ಯಮ ವೇಗಿ ಆರ್.ವಿನಯ್ ಕುಮಾರ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿದ್ದರು. ಆದರೆ ಕ್ರೀಡಾಸ್ಫೂರ್ತಿ ಮರೆತಿದ್ದ ಪೂಜಾರ, ಎರಡೂ ಇನ್ನಿಂಗ್ಸ್ ಗಳಲ್ಲಿ ಕ್ರೀಸ್ ತೊರೆಯದೆ, ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದ್ದರು.

ಈ ಘಟನೆಯ ಬಗ್ಗೆ ಚೇತೇಶ್ವರ್ ಪೂಜಾರ್ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ವಾಟ್ ದಿ ಡಕ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಪೂಜಾರ ಔಟಾಗಿದ್ದರೂ ತಾವೇಕೆ ಕ್ರೀಸ್ ತೊರೆಯಲಿಲ್ಲ ಎಂಬುದನ್ನು ವಿವರಿಸಿದ್ದಾರೆ.

ಕರ್ನಾಟಕ ವಿರುದ್ಧ ಸೆಮಿಫೈನಲ್ ವಿವಾದದ ಬಗ್ಗೆ ಪೂಜಾರ ಹೇಳಿದ್ದನು..?ಸಂಪೂರ್ಣ ವೀಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ.

https://www.youtube.com/watch?v=7x_vN_xh3oI

 

LEAVE A REPLY

Please enter your comment!
Please enter your name here

nineteen − nineteen =