ರಣಜಿ ಟ್ರೋಫಿ 2019-20: ಇಲ್ಲಿದೆ ನೋಡಿ ಕರ್ನಾಟಕ ತಂಡದ ಕಂಪ್ಲೀಟ್ ಶೆಡ್ಯೂಲ್

0

ಬೆಂಗಳೂರು, ಅಕ್ಟೋಬರ್ 21: ರಣಜಿ ಟ್ರೋಫಿ 2019-20ನೇ ಸಾಲಿನ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಡಿಸೆಂಬರ್ 9ರಂದು ಆರಂಭವಾಗಲಿರುವ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ತಮಿಳುನಾಡು ತಂಡವನ್ನು ಎದುರಿಸಲಿದೆ.

ಕರ್ನಾಟಕ ತಂಡ ಎಲೈಟ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಲೀಗ್ ಹಂತದಲ್ಲಿ ತಮಿಳುನಾಡು, ಮುಂಬೈ, ಬರೋಡ, ಸೌರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರೈಲ್ವೇಸ್ ಮತ್ತು ಹಿಮಾಚಲ ಪ್ರದೇಶ ತಂಡಗಳ ಸವಾಲನ್ನು ಎದುರಿಸಲಿದೆ.

ತಮಿಳುನಾಡು ವಿರುದ್ಧದ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದರೆ, ಮುಂಬೈ ವಿರುದ್ಧದ ಪಂದ್ಯ ಮೂಂಬೈನಲ್ಲೂ, ಸೌರಾಷ್ಟ್ರ ವಿರುದ್ಧದ ಪಂದ್ಯ ರಾಜ್ಕೋಟ್ನಲ್ಲೂ ಹಾಗೂ ಬರೋಡ ವಿರುದ್ಧದ ಪಂದ್ಯ ಬರೋಡದಲ್ಲೂ ನಡೆಯಲಿದೆ.

ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ರೈಲ್ವೇಸ್ ಹಾಗೂ ಮಧ್ಯಪ್ರದೇಶ ವಿರುದ್ಧದ ಪಂದ್ಯಗಳನ್ನು ಕರ್ನಾಟಕ ತವರು ನೆಲದಲ್ಲೇ ಆಡಲಿದೆ. ಕರ್ನಾಟಕ ತಂಡ 2013-14 ಹಾಗೂ 2014-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದ ನಂತರ ಮತ್ತೆ ಪ್ರಶಸ್ತಿ ಗೆದ್ದಿಲ್ಲ. ಕಳೆದ ಸಾಲಿನ ಟೂರ್ನಿಯಲ್ಲಿ ಕರ್ನಾಟಕ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೋಲು ಕಂಡಿತ್ತು.

ರಣಜಿ ಟ್ರೋಫಿ 2019-20: ಕರ್ನಾಟಕ ತಂಡದ ವೇಳಾಪಟ್ಟಿ

ಕರ್ನಾಟಕ Vs ತಮಿಳುನಾಡು (ಡಿಸೆಂಬರ್ 9-12, ಚೆನ್ನೈ)

ಕರ್ನಾಟಕ Vs ಉತ್ತರ ಪ್ರದೇಶ (ಡಿಸೆಂಬರ್ 17-20, Home Match)

ಕರ್ನಾಟಕ Vs ಹಿಮಾಚಲ ಪ್ರದೇಶ (ಡಿಸೆಂಬರ್ 25-28, Home Match)

ಕರ್ನಾಟಕ Vs ಮುಂಬೈ (ಜನವರಿ 3-6, ಮುಂಬೈ)

ಕರ್ನಾಟಕ Vs ಸೌರಾಷ್ಟ್ರ (ಜನವರಿ 11-14, ರಾಜ್ಕೋಟ್)

ಕರ್ನಾಟಕ Vs ರೈಲ್ವೇಸ್ (ಜನವರಿ 27-30, Home Match)

ಕರ್ನಾಟಕ Vs ಮಧ್ಯಪ್ರದೇಶ (ಫೆಬ್ರವರಿ 4-7, Home Match)

ಕರ್ನಾಟಕ Vs ಬರೋಡ (ಫೆಬ್ರವರಿ 12-15, ಬರೋಡ)

LEAVE A REPLY

Please enter your comment!
Please enter your name here

2 × 3 =