ರಣಜಿ ಟ್ರೋಫಿ: ಗೋವಾ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ಕೋಚ್

0

ಬೆಂಗಳೂರು, ಆಗಸ್ಟ್ 9: ಕರ್ನಾಟಕದ ದಿಗ್ಗಜ ವೇಗದ ಬೌಲರ್ ದೊಡ್ಡ ಗಣೇಶ್ ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್ ಟೂರ್ನಿಗೆ ಗೋವಾ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

46 ವರ್ಷದ ದೊಡ್ಡ ಗಣೇಶ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA)ಯ ಆಡಳಿತ ಮಂಡಳಿ ಹಾಗೂ ರಾಜ್ಯ ಹಿರಿಯರ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಗೋವಾ ತಂಡದ ಕೋಚ್ ಆಗಿ ನೇಮಕಗೊಂಡಿರುವ ಕಾರಣ KSCAನಲ್ಲಿ ಹೊಂದಿದ್ದ ಆ ಎರಡೂ ಹುದ್ದೆಗಳಿಗೆ ದೊಡ್ಡ ಗಣೇಶ್ ರಾಜೀನಾಮೆ ನೀಡಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.

90ರ ದಶಕದಲ್ಲಿ ಕರ್ನಾಟಕ ತಂಡದ ರಣಜಿ ವಿಕ್ರಮಗಳ ರೂವಾರಿಯಾಗಿದ್ದ ದೊಡ್ಡ ಗಣೇಶ್, 104 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು 365 ವಿಕೆಟ್ಸ್ ಪಡೆದಿದ್ದಾರೆ. ಅಲ್ಲದೆ 89 ಲಿಸ್ಟ್ ಪಂದ್ಯಗಳಿಂದ 128 ವಿಕೆಟ್ಸ್ ಕಬಳಿಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 1999ನೇ ಸಾಲಿನ ರಣಜಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಪ್ರಥಮ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದಿದ್ದ ಗಣೇಶ್ ರಾಜ್ಯ ತಂಡ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದರು.

ಅನುಭವಿ ಕೋಚ್ ಆಗಿರುವ ದೊಡ್ಡ ಗಣೇಶ್ ಈ ಹಿಂದೆಯೂ ಗೋವಾ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಗಣೇಶ್ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಹಾಲಿ ಚಾಂಪಿಯನ್ ಸೀಕೆಮ್ ಮಧುರೈ ಪ್ಯಾಂಥರ್ಸ್ ತಂಡದ ಕೋಚ್ ಆಗಿದ್ದಾರೆ.

LEAVE A REPLY

Please enter your comment!
Please enter your name here

13 − 1 =