ರಣಜಿ ಟ್ರೋಫಿ: ಗೌತಮ್ ಮ್ಯಾಜಿಕ್, ಸೆಮಿಫೈನಲ್‌ಗೆ ಕರ್ನಾಟಕ

0

ಜಮ್ಮು, ಫೆಬ್ರವರಿ 24: ಆಫ್’ಸ್ಪಿನ್ನರ್ ಕೆ.ಗೌತಮ್ ಅವರ ಮಾರಕ ಸ್ಪಿನ್ ದಾಳಿಯ ಬಲದಿಂದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಜಮ್ಮುವಿನ ಗಾಂಧಿ ಸ್ಮಾರಕ ಸೈನ್ಸ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಆತಿಥೇಯ ಜಮ್ಮು-ಕಾಶ್ಮೀರ ತಂಡವನ್ನು 167 ರನ್’ಗಳಿಂದ ಸೋಲಿಸಿತು. ಗೆಲ್ಲಲು 331 ರನ್’ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡ, ಕೆ.ಗೌತಮ್ ಅವರ ಮಾರಕ ದಾಳಿಗೆ ತತ್ತರಿಸಿ 163 ರನ್’ಗಲಿಗೆ ಆಲೌಟಾಯಿತು. ಅಮೋಘ ದಾಳಿ ಸಂಘಟಿಸಿದ ಗೌತಮ್ 54 ರನ್ನಿತ್ತು 7 ವಿಕೆಟ್ ಕಬಳಿಸಿದರು.

ಫೆಬ್ರವರಿ 29ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಆತಿಥೇಯ ಬಂಗಾಳ ತಂಡವನ್ನು ಎದುರಿಸಲಿದೆ.

Brief scores: Karnataka (I innings): 206 & II Innings: 316 in 106.5 overs (KV Siddharth 98, R Samarth 74, Manish Pandey 35; Parvez Rasool 3/88) beat I Innings: Jammu & Kashmir: 192 & II Innings: 163 in 44.4 overs (SP Khajura 30, SS Pundir 31; K Gowtham 7/54, M Prasidh Krishna 1/21, Ronit More 1/30, J Suchit 1/38) by 167 runs.

LEAVE A REPLY

Please enter your comment!
Please enter your name here

7 + 5 =