ರಣಜಿ ಟ್ರೋಫಿ: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ.. ನಾಕೌಟ್‌ನಲ್ಲಿ ರಾಹುಲ್, ಪಾಂಡೆ ಬಲ

0
Karnataka player pose for a selfie after their victory over Baroda on Friday. PC: KSCA

ಬೆಂಗಳೂರು, ಫೆಬ್ರವರಿ 14: 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ಬರೋಡ ವಿರುದ್ಧದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಕರುಣ್ ನಾಯರ್ ನಾಯಕತ್ವದ ಕರ್ನಾಟಕದ ತಂಡ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಂತ್ಯಗೊಂಡ ಪಂದ್ಯವನ್ನು ಮೂರೇ ದಿನಗಳಲ್ಲಿ ಗೆದ್ದುಕೊಂಡು ಪೂರ್ಣ 6 ಅಂಕ ಸಂಪಾದಿಸಿತು. ಆ ಮೂಲಕ ಎಲೈಟ್ A+B ಗುಂಪಿನಲ್ಲಿ ಆಡಿದ 8 ಪಂದ್ಯಗಳಿಂದ 4 ಗೆಲುವು ಹಾಗೂ 4 ಡ್ರಾಗಳೊಂದಿಗೆ 31 ಅಂಕ ಸಂಪಾದಿಸಿ 2ನೇ ತಂಡವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಪಂದ್ಯದ ಮೂರನೇ ದಿನ ಗೆಲ್ಲಲು 149 ರನ್’ಗಳ ಗುರಿ ಪಡೆದಿದ್ದ ಕರ್ನಾಟಕ ನಾಯಕ ಕರುಣ್ ನಾಯರ್ ಅವರ ಅಜೇಯ 71 ರನ್’ಗಳ ನೆರವಿನಿಂದ ಕೇವಲ 2 ವಿಕೆಟ್ ನಷ್ಟದಲ್ಲಿ ಗುರಿ ತಲುಪಿ ಸುಲಭ ಜಯ ದಾಖಲಿಸಿತು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿದು ನಾಯಕನ ಆಟ ಪ್ರದರ್ಶಿಸಿದ ಕರುಣ್ ಪ್ರಸಕ್ತ ಟೂರ್ನಿಯಲ್ಲಿ 2ನೇ ಅರ್ಧಶತಕ ಬಾರಿಸಿ ಮಿಂಚಿದರು.

ಇದಕ್ಕೂ ಮೊದಲು ಬರೋಡ ತಂಡ ತನ್ನ ದ್ವಿತೀಯ ಇನ್ನಿಂಗ್ಸ್’ನಲ್ಲಿ 296 ರನ್’ಗಳಿಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್’ನಲ್ಲಿ 148 ರನ್’ಗಳ ದೊಡ್ಡ ಮುನ್ನಡೆ ಸಂಪಾದಿಸಿದ್ದ ಕಾರಣ ಕರ್ನಾಟಕದ ಗೆಲುವು ಸುಲಭವಾಯಿತು.

ಕ್ವಾರ್ಟರ್ ಫೈನಲ್ ಪಂದ್ಯಗಳು ಫೆಬ್ರವರಿ 20ರಂದು ಆರಂಭವಾಗಲಿದ್ದು, ಭಾರತ ತಂಡದ ಸೇವೆಯಿಂದ ಮರಳಿರುವ ಸ್ಟಾರ್ ಆಟಗಾರರಾದ ಕೆ.ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಕರ್ನಾಟಕ ಪರ ಕಣಕ್ಕಿಳಿಯಲಿದ್ದಾರೆ.

Brief scores: Baroda (I innings): 85 all out in 33.5 overs (Ahmadnoor Pathan 45, Abhimanyu Mithun 3/26, K. Gowtham 3/25, Prasidh Krishna 2/7) & II innings: 296 all out in 89.5 overs (Ahmadnoor Pathan 90, Deepak Hooda 50, Abhimanyu Rajput 52, Parth Kohli 42, Prasidh Krishna 4/45, K. Gowtham 2/99, Ronit More 3/68) lost to Karnataka (I innings): 233 all out in 72.5 overs (KV Siddharth 29, Karun Nair 47, S. Sharath 34, Abhimanyu Mithun 40, Soyeb Sopariya 5/83, Abhimanyu Rajput 2/17, Bhargav Bhatt 2/74) & II innings: 150/2 in 44.4 overs (R. Samarth 25, Karun Nair 71 not out, KV Siddharth 29 not out, Bhargav Bhatt 2/62) by 8 wickets.

LEAVE A REPLY

Please enter your comment!
Please enter your name here

15 − 7 =