ರಣಜಿ ಟ್ರೋಫಿ ನಾಕೌಟ್: ಕರ್ನಾಟಕ ತಂಡಕ್ಕಿಲ್ಲ ಕೆ.ಎಲ್ ರಾಹುಲ್ ಬಲ

0
ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ PC: BCCI
ಬೆಂಗಳೂರು, ಫೆಬ್ರವರಿ 17: ಇದೇ ತಿಂಗಳ 20ರಂದು ಜಮ್ಮುವಿನಲ್ಲಿ ಆರಂಭವಾಗಲಿರುವ ಜಮ್ಮು-ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಸಜ್ಜಾಗುತ್ತಿದೆ. ಆದರೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ರಣಜಿ ನಾಕೌಟ್ ಪಂದ್ಯಗಳಿಗೆ ಲಭ್ಯರಿಲ್ಲ.
ನ್ಯೂಜಿಲೆಂಡ್ ಪ್ರವಾಸದಿಂದ ವಾಪಸ್ ಆಗಿರುವ ರಾಹುಲ್ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿತ್ತು. ಆದರೆ ಸತತ ಕ್ರಿಕೆಟ್ ಪಂದ್ಯಗಳಿಂದ ಬಳಲಿರುವ ರಾಹುಲ್ 3 ವಾರಗಳ ವಿಶ್ರಾಂತಿಗೆ ಮೊರೆ ಹೋಗಿರುವ ಕಾರಣ ರಣಜಿ ಟ್ರೋಫಿಯಲ್ಲಿ ಆಡುತ್ತಿಲ್ಲ.
ಮಾರ್ಚ್ 12ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ರಣಜಿ ನಾಕೌಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಿಂದ ಮರಳಿರುವ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ರಣಜಿ ನಾಕೌಟ್ ಪಂದ್ಯಗಳಲ್ಲಿ ಆಡಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

LEAVE A REPLY

Please enter your comment!
Please enter your name here

eleven − 4 =