ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಬಲಿಷ್ಠ ಕರ್ನಾಟಕಕ್ಕೆ ಜಮ್ಮು& ಕಾಶ್ಮೀರ ಎದುರಾಳಿ

0

ಬೆಂಗಳೂರು, ಫೆಬ್ರವರಿ 15: ಫೆಬ್ರವರಿ 20ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ತಂಡಕ್ಕೆ ಸುಲಭ ಸವಾಲು ಎದುರಾಗಿದ್ದು, ದುರ್ಬಲ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ.

ಬಿಸಿಸಿಐ ನಿಯಮಗಳಂತೆ ಈ ಪಂದ್ಯ ಜಮ್ಮು-ಕಾಶ್ಮೀರದ ತವರು ಜಮ್ಮುವಿನಲ್ಲಿ ನಡೆಯಬೇಕಿದೆ. ಆದರೆ ಲಾಜಿಸ್ಟಿಕ್ ಹಾಗೂ ಇತರ ಕೆಲ ಕಾರಣಗಳಿಂದ ಈ ಪಂದ್ಯದ ಆತಿಥ್ಯವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡುವಂತೆ ಬಿಸಿಸಿಐಗೆ ಕೆಎಸ್”ಸಿಎ ಮನವಿ ಮಾಡಿದೆ. ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದರೆ ಕ್ವಾರ್ಟರ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ಎಲೈಟ್ A+B ಕ್ರಾಸ್ ಪೂಲ್’ನಲ್ಲಿ ಆಡಿದ 8 ಲೀಗ್ ಪಂದ್ಯಗಳಲ್ಲಿ 4 ಗೆಲುವು ಹಾಗೂ 4 ಡ್ರಾ ಸಹಿತ 31 ಅಂಕಗಳೊಂದಿಗೆ 3ನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಾಕೌಟ್ ಹಂತದ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳಿಗೆ ಸ್ಟಾರ್ ಆಟಗಾರರಾದ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಲಭ್ಯರಿರುವುದು ಕರ್ನಾಟಕಕ್ಕೆ ಅನೆ ಬಲ ತಂದುಕೊಟ್ಟಿದೆ.

ಕ್ವಾರ್ಟರ್ ಫೈನಲ್ಸ್: ಕರ್ನಾಟಕ Vs ಜಮ್ಮು-ಕಾಶ್ಮೀರ,  ಸೌರಾಷ್ಟ್ರ Vs ಆಂಧ್ರ, ಗುಜರಾತ್ Vs ಗೋವಾ ಹಾಗೂ ಬಂಗಾಳ Vs ಒಡಿಶಾ

LEAVE A REPLY

Please enter your comment!
Please enter your name here

15 − nine =