ವಿದೇಶದಲ್ಲಿ ಪತ್ನಿ-ಪುತ್ರನೊಂದಿಗೆ ಉತ್ತಪ್ಪ ರಜಾ ಮಜಾ..!

0

ಬೆಂಗಳೂರು, ಮೇ 31: ಕೊಡಗಿನ ಕಲಿ ರಾಬಿನ್ ಉತ್ತಪ್ಪ ಸದ್ಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದಾರೆ. ಐಪಿಎಲ್ ನಂತರ ಯಾವುದೇ ಕ್ರಿಕೆಟ್ ಸರಣಿಗಳಿಲ್ಲದ ಕಾರಣ ರಾಬಿನ್ ಉತ್ತಪ್ಪ ಪತ್ನಿ ಮತ್ತು ಪುತ್ರನೊಂದಿಗೆ ರಜಾ ಮಜಾ ಕಳೆಯುತ್ತಿದ್ದಾರೆ.

ಸದ್ಯ ವಿದೇಶ ಪ್ರವಾಸದಲ್ಲಿರುವ ಉತ್ತಪ್ಪ ಅಲ್ಲಿ ಪತ್ನಿ ಶೀತಲ್ ಮತ್ತು ಪುತ್ರನೊಂದಿಗೆ ಬೀಚ್ ಒಂದರಲ್ಲಿ ಮಜವಾಗಿ ಕಾಲ ಕಳೆದಿದ್ದಾರೆ. ಈ ಚಿತ್ರವನ್ನು ಶೀತಲ್ ತಮ್ಮ ಇನ್ಸ್ ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಐಪಿಎಲ್-12 ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ರಾಬಿನ್ ಉತ್ತಪ್ಪ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸಿರಲಿಲ್ಲ. ಹೀಗಾಗಿ ಕೆಲ ಪಂದ್ಯಗಳಲ್ಲಿ ಆಡುವ ಬಳಗದಲ್ಲೂ ಸ್ಥಾನ ಕಳೆದುಕೊಂಡಿದ್ದರು.

33 ವರ್ಷದ ಬಲಗೈ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ದೇಶೀಯ ಕ್ರಿಕೆಟ್ ನಲ್ಲಿ ಕಳೆದೆರಡು ವರ್ಷಗಳಿಂದ ಸೌರಾಷ್ಟ್ರ ಪರ ಆಡುತ್ತಿದ್ದಾರೆ. ಭಾರತ ಪರ 46 ಏಕದಿನ ಪಂದ್ಯಗಳನ್ನಾಡಿರುವ ಉತ್ತಪ್ಪ, 13 ಟಿ20 ಪಂದ್ಯಗಳನ್ನೂ ಆಡಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತ ತಂಡದ ಸದಸ್ಯರಾಗಿದ್ದ ಉತ್ತಪ್ಪ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ಆಟಗಾರನೆಂಬ ದಾಖಲೆ ಉತ್ತಪ್ಪ ಅವರ ಹೆಸರಿನಲ್ಲಿದೆ.

LEAVE A REPLY

Please enter your comment!
Please enter your name here

ten − 6 =