ಉತ್ತಪ್ಪ ಈಸ್ ಬ್ಯಾಕ್: 4 ತಿಂಗಳ ಬಳಿಕ ಅಖಾಡಕ್ಕೆ ಕೊಡಗಿನ ವೀರ

0
Robin Uthappa

ಕರ್ನಾಟಕದ ಅನುಭವಿ ಕ್ರಿಕೆಟಿಗ, ಕೊಡಗಿನ ವೀರ ರಾಬಿನ್ ಉತ್ತಪ್ಪ 4 ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ಅಖಾಡಕ್ಕೆ ಇಳಿಯಲಿದ್ದಾರೆ.

ನಾಳೆಯಿಂದ ಮಧ್ಯಪ್ರದೇಶದ ಇಂದೋರ್ ಮೈದಾನದಲ್ಲಿ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ಸೌರಾಷ್ಟ್ರ ಪರ ಕಣಕ್ಕಿಳಿಯಲಿದ್ದಾರೆ.

33 ವರ್ಷದ ರಾಬಿನ್ ಉತ್ತಪ್ಪ ಕಳೆದ ಎರಡು ವರ್ಷಗಳಿಂದ ಸೌರಾಷ್ಟ್ರ ಪರ ಆಡುತ್ತಿದ್ದಾರೆ. 

ಬಲ ಪಾದದ ಗಾಯಕ್ಕೊಳಗಾಗಿದ್ದ ಉತ್ತಪ್ಪ ಇಂಗ್ಲೆಂಡ್ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

ಪ್ರಸಕ್ತ ಸಾಲಿನ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸೌರಾಷ್ಟ್ರ ತಂಡ ‘ಸಿ’ ಗುಂಪಿನಲ್ಲಿದ್ದು, ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

eighteen − eleven =