ಇಲ್ಲಿದ್ದಾನೆ ಕರ್ನಾಟಕ ತಂಡದ ಹೊಸ ರನ್ ಮಷಿನ್.. ಈತ ಧಾರವಾಡದ ಹುಡುಗ..!

0

ಇಂದೋರ್, ಮಾರ್ಚ್ 14: ಧಾರವಾಡದ ಹುಡುಗ ರೋಹಮ್ ಕದಂ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು 536 ರನ್ ಕಲೆ ಹಾಕಿ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದಾರೆ.

24 ವರ್ಷದ ಉದಯೋನ್ಮುಖ ಎಡಗೈ ಬ್ಯಾಟ್ಸ್ ಮನ್ ರೋಹನ್ ಕದಂ ಕರ್ನಾಟಕ ಪ್ರೀಮಿಯರ್ ಲೀಗ್ ನಿಂದ ಬೆಳಕಿಗೆ ಬಂದ ಪ್ರತಿಭೆ. ಬಳ್ಳಾರಿ ಟಸ್ಕರ್ಸ್ ಪರ ಉತ್ತಮ ಆಟ ಪ್ರದರ್ಶಿಸಿದ್ದರಿಂದ ಕರ್ನಾಟಕ ಟಿ20 ತಂಡಕ್ಕೆ ಆಯ್ಕೆಯಾಗಿದ್ದ ಕದಂ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶಿಸಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಟೂರ್ನಿಯಲ್ಲಿ ಎಲ್ಲಾ 12 ಪಂದ್ಯಗಳನ್ನಾಡಿದ ರೋಹನ್ ಕದಂ 53.60 ಸರಾಸರಿಯಲ್ಲಿ 5 ಅರ್ಧಶತಕಗಳ ಸಹಿತ 536 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 63 ಬೌಂಡರಿಗಳು ಹಾಗೂ 14 ಸಿಕ್ಸರ್ಸ್ ಸೇರಿವೆ. ಮಹಾರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ರೋಹನ್ ಕೇವಲ 39 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 3 ಸಿಕ್ಸರ್ಸ್ ನೆರವಿನಿಂದ 153.84ರ ಸ್ಟ್ರೈಕ್ ರೇಟ್ ನಲ್ಲಿ 60 ರನ್ ಗಳಿಸಿ ಕರ್ನಾಟಕ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಪ್ರಸಕ್ತ ಸಾಲಿನ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಘಟಾನುಘಟಿ ಆಟಗಾರರನ್ನು ಹಿಂದಿಕ್ಕಿರುವ ರೋಹನ್ ಕದಂ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆ ಹಾಕಿದ್ದಾರೆ.

ಟೂರ್ನಿಯಲ್ಲಿ ರೋಹನ್ ಕದಂ 12 ಇನ್ನಿಂಗ್ಸ್ ಗಳಲ್ಲಿ ಗಳಿಸಿರುವ ರನ್: 26, 81*, 25, 78, 16, 89, 25, 62*, 35, 00, 39, 60

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ 2019: ಅತಿ ಹೆಚ್ಚು ರನ್ ಗಳಿಸಿದವರು

ಆಟಗಾರ                               ರನ್     ಪಂದ್ಯ   ಸರಾಸರಿ          ಶತಕ    ಅರ್ಧಶತಕ

ರೋಹನ್ ಕದಂ(ಕರ್ನಾಟಕ)          536     12       53.60             00      05

ಶ್ರೇಯಸ್ ಅಯ್ಯರ್(ಮುಂಬೈ)        484     10       60.50            02       01

ಪ್ರಥಮ್ ಸಿಂಗ್(ರೈಲ್ವೇಸ್)            438     10       54.75             00      04

ಸಮರ್ಥ್ ಸಿಂಗ್(ಉ.ಪ್ರದೇಶ)         385     11        38.50             00      03

ಶ್ರೀವತ್ಸ್ ಗೋಸ್ವಾಮಿ(ಬಂಗಾಳ)      369     11        36.90             00      03

LEAVE A REPLY

Please enter your comment!
Please enter your name here

15 − 12 =