
ಬೆಂಗಳೂರು, ನವೆಂಬರ್ 10: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ Rotaract ಕ್ಲಬ್ ಆಫ್ ಬೆಂಗಳೂರು ಸೌಥ್ ಇತ್ತೀಚೆಗೆ ಸ್ಮ್ಯಾಷ್ ಹೆಸರಿನ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಿತ್ತು.
ಬಸವನಗುಡಿ ಬಳಿ ಇರುವ ಎನ್.ಆರ್ ಕಾಲೋನಿ ಸ್ಪೋರ್ಟ್ಸ್ ಕ್ಲಬ್’ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ 88ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಬಸವನಗುಡಿ ಶಾಸಕ ರವಿಸುಬ್ರಮಣ್ಯ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಬ್ಯಾಡ್ಮಿಂಟನ್ ಆಡುವ ಮೂಲಕ ಟೂರ್ನಿಯನ್ನು ಉದ್ಘಾಟಿಸಿದರು.
ಟೂರ್ನಿಯಲ್ಲಿ ಸಂಗ್ರಹಿಸಿದ ಹಣವನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ನೆರವು ನೀಡಲು ಸಂಬಂಧಪಟ್ಟ ಆಸ್ಪತ್ರೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಅದರಂತೆ ಟೂರ್ನಿಯ ಆಯೋಜಕರಾದ Rotaract ಕ್ಲಬ್ ಆಫ್ ಬೆಂಗಳೂರು ಸೌಥ್ ಟೂರ್ನಿಯಿಂದ ಸಂಗ್ರಿಹಿಸಿದ ಹಣವನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಹೃದ್ರೋಗ ಆಸ್ಪತ್ರೆಗೆ ಹಸ್ತಾಂತರಿಸಿದೆ.