ವಿಶ್ವಕಪ್: ಅಭಿಮಾನಿಯನ್ನು ಕ್ರಿಕೆಟ್ ಜನಕರ ನಾಡಿಗೆ ಕಳುಹಿಸಿಕೊಟ್ಟ ಸಚಿನ್..!

0

ಲಂಡನ್, ಮೇ 24: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಅಭಿಮಾನಿ ಸುಧೀರ್ ಕುಮಾರ್ ಅವರನ್ನು ಐಸಿಸಿ ಕ್ರಿಕೆಟ್ ವಿಶ್ವಕಪ್ ವೀಕ್ಷಿಸಲು ಇಂಗ್ಲೆಂಡ್ ಗೆ ಕಳುಹಿಸಿಕೊಟ್ಟಿದ್ದಾರೆ.

ಸುಧೀರ್ ಕುಮಾರ್ ಅವರಿಗೆ ಸಚಿನ್ ಮುಂಬೈನಿಂದ ಲಂಡನ್ ಗೆ ವಿಮಾನ ಪ್ರಯಾಣ ವೆಚ್ಚ ಭರಿಸಿದ್ದಾರೆ. ಈ ವಿಚಾರವನ್ನು ಸುಧೀರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಐಸಿಸಿ ವಿಶ್ವಕಪ್ ಟೂರ್ನಿ ಮೇ 30ರಂದು ಆರಂಭವಾಗಲಿದ್ದು, ಜೂನ್ 5ರಂದು ನಡೊಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಉ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಬಾರಿಯ ವಿಶ್ವಕಪ್ ಟೂರ್ನಿ 1992ರ ವಿಶ್ವಕಪ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡಗಳು ಲೀಗ್ ಹಂತದಲ್ಲಿ ತಲಾ 9 ಪಂದ್ಯಗಳನ್ನಾಡಲಿವೆ. ಲೀಗ್ ಹಂತದಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜುಲೈ 14ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here

twenty − 5 =