ಬೆಳಗಾವಿಯಲ್ಲಿ ಸ್ಫೋಟಕ ಶತಕ ಬಾರಿಸಿದ ಶುಭಮನ್ ಗಿಲ್

0

ಬೆಳಗಾವಿ, ಜೂನ್ 8: ಭಾರತೀಯ ಕ್ರಿಕೆಟ್ ನ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿರುವ ಪಂಜಾಬ್ ಬ್ಯಾಟ್ಸ್ ಮನ್ ಶುಭಮನ್ ಗಿಲ್, ಬೆಳಗಾವಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದಾರೆ.

ಶುಭಮನ್ ಗಿಲ್ ಮತ್ತು ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್ ಅವರ ಶತಕಗಳ ನೆರವಿನಿಂದ ಭಾರತ ತಂಡ ಶ್ರೀಲಂಕಾ ತಂಡವನ್ನು 10 ವಿಕೆಟ್ ಗಳಿಂದ ಬಗ್ಗು ಬಡಿದಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 242 ರನ್ ಕಲೆ ಹಾಕಿತು. ಭಾರತ  ಪರ ಕನ್ನಡಿಗ ಶ್ರೇಯಸ್ ಗೋಪಾಲ್ 7 ಓವರ್ ಗಳಲ್ಲಿ 26 ರನ್ನಿತ್ತು 1 ವಿಕೆಟ್ ಪಡೆದರು.

ನಂತರ ಗುರಿ ಬೆನ್ನಟ್ಟಿದ ಭಾರತ ತಂಡ 33.3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 243 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿತು. ಸಿಡಿಲಬ್ಬರದ ಆಟವಾಡಿದ ಶುಭಮನ್ ಗಿಲ್ 96 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು 2 ಸಿಕ್ಸರ್ಸ್ ನೆರವಿನಿಂದ 109 ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ 94 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು 4 ಸಿಕ್ಸರ್ಸ್ ಸಹಿತ ಅಜೇಯ 125 ರನ್ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ ’: 50 ಓವರ್ ಗಳಲ್ಲಿ 242/7 (ಶೆಹಾನ್ ಜಯಸೂರ್ಯ 101, ಇಶಾನ್ ಜಯರತ್ನೆ ಅಜೇಯ 79; ತುಷಾರ್ ದೇಶಪಾಂಡೆ 2/51, ಶಿವಂ ದುಬೆ 2/42, ಶ್ರೇಯಸ್ ಗೋಪಾಲ್ 1/26).

ಭಾರತ ’: 33.3 ಓವರ್ ಗಳಲ್ಲಿ 243/0 (ಶುಭಮನ್ ಗಿಲ್ ರಿಟೈರ್ಡ್ ಹರ್ಟ್ 109, ಋತುರಾಜ್ ಗಾಯಕ್ವಾಡ್ ಅಜೇಯ 125)

LEAVE A REPLY

Please enter your comment!
Please enter your name here

14 − three =