2008ರ U19 ವಿಶ್ವಕಪ್ ಹೀರೊಗೆ ಮದುವೆ ಸಂಭ್ರಮ..

0

ಮೊಹಾಲಿ, ಮಾರ್ಚ್ 9: 2008ರ ಐಸಿಸಿ U19 ವಿಶ್ವಕಪ್ ಹೀರೊ, ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್, ಪಂಜಾಬ್ ನ ಸಿದ್ಧಾರ್ಥ್ ಕೌಲ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

PC: Twitter

ಬಲಗೈ ವೇಗದ ಬೌವರ್ ಆಗಿರುವ 29 ವರ್ಷದ ಸಿದ್ಧಾರ್ಥ್ ಕೌರ್, ಹರ್ಸಿಮ್ರನ್ ಕೌರ್ ಅವರನ್ನು ವರಿಸಿದ್ದಾರೆ. ಭಾರತ ಪರ ಸಿದ್ಧಾರ್ಥ್ ಕೌಲ್ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 4 ವಿಕೆಟ್ಸ್ ಪಡೆದಿದ್ದಾರೆ. ಪಂಜಾಬ್ ಪರ 58 ಪ್ರಥಮದರ್ಜೆ ಪಂದ್ಯಗಳಿಂದ 205 ವಿಕೆಟ್ಸ್ ಹಾಗೂ 80 ಲಿಸ್ಟ್ ಎ ಪಂದ್ಯಗಳಿಂದ 138 ವಿಕೆಟ್ಸ್ ಕಬಳಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವ ಕೌಲ್, ಒಟ್ಟು 86 ಟಿ20 ಪಂದ್ಯಗಳನ್ನಾಡಿದ್ದು 95 ವಿಕೆಟ್ಸ್ ಪಡೆದಿದ್ದಾರೆ.

PC: Twitter

ಸಿದ್ಧಾರ್ಥ್ ಕೌಲ್ ಅವರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಆಟಗಾರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

four × three =