ಗಂಗೂಲಿಯನ್ನು ಮದುವೆಯಾಗಬೇಕೆಂದಿದ್ದೆ, ಆದರೆ ಲವ್…

0

ಬೆಂಗಳೂರು, ಮಾರ್ಚ್ 6: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು 90ರ ದಶಕದ ಮೋಹಕ ತಾರೆ ನಗ್ಮಾ ಅವರ ಮಧ್ಯೆ ಪ್ರೀತಿ-ಪ್ರೇಮವಿದ್ದ ವಿಚಾರ ಗೊತ್ತೇ ಇದೆ.

ಪರಸ್ಪರ ಪ್ರೀತಿಸುತ್ತಿದ್ದ ದಾದಾ ಮತ್ತು ನಗ್ಮಾ ನಂತರ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದರು. ಗಂಗೂಲಿ ಡೋನಾ ಅವರನ್ನು ವರಿಸಿದರೆ, ನಗ್ಮಾ ಇನ್ನೂ ಮದುವೆಯಾಗಿಲ್ಲ.

ಸೌರವ್ ಗಂಗೂಲಿಅವರೊಂದಿಗೆ ತಮ್ಮ ಲವ್ ಬ್ರೇಕಪ್ ಆಗಲು ಏನು ಕಾರಣ ಎಂಬುದನ್ನು ನಗ್ಮಾ ಇದೀಗ ಬಿಚ್ಚಿಟ್ಟಿದ್ದಾರೆ.

‘’ಗಂಗೂಲಿ ಮತ್ತು ನನ್ನ ನಡುವೆ ನಿಜವಾದ ಪ್ರೀತಿಯಿತ್ತು. ಆದರೆ ಮದುವೆಯಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ನಮ್ಮ ವೃತ್ತಿಜೀವನ. ಮದುವೆಯಾದರೆ ನಾನು ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ವೃತ್ತಿಜೀವನದ ಯಶಸ್ಸಿಗಾಗಿ ಇಬ್ಬರೂ ಬೇರೆಯಾದೆವು’’ ಎಂದು ನಗ್ಮಾ ಹೇಳಿದ್ದಾರೆ.

ಹಿಂದೊಮ್ಮೆ ಗಂಗೂಲಿ ಮತ್ತು ನಗ್ಮಾ ಕಾಳಹಸ್ತಿಯಲ್ಲಿ ಒಟ್ಟಾಗಿ ಪೂಜೆ ಸಲ್ಲಿಸಿ ಸುದ್ದಿಯಾಗಿದ್ದರು. 44 ವರ್ಷದ ನಗ್ಮಾ ಸಿನಿಯಾ ನಂತರ ರಾಜಕೀಯ ಪ್ರವೇಶಿಸಿದ್ದು, ಕಾಂಗ್ರೆಸ್ ನ ಪ್ರಭಾವಿ ನಾಯಕಿಯಾಗಿದ್ದಾರೆ. 

LEAVE A REPLY

Please enter your comment!
Please enter your name here

9 + 2 =