ಬಿಸಿಸಿಐನಲ್ಲಿ ಇನ್ನು 10 ತಿಂಗಳು ಸೌರವ್ ಗಂಗೂಲಿ ದಾದಾಗಿರಿ..!

0

ಮುಂಬೈ, ಅಕ್ಟೋಬರ್ 23: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ 39ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಮುಂಬೈನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಮಂಡಳಿಯ ಹೊಸ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆಯನ್ನು ಘೋಷಿಸಲಾಯಿತು. ನೂತನ ಕಾರ್ಯದರ್ಶಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೌರವ್ ಗಂಗೂಲಿ 10 ತಿಂಗಳುಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿರಲಿದ್ದಾರೆ. ಈಗಾಗಲೇ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷಾಗಿ 5 ವರ್ಷ ಪೂರೈಸಿರುವ ಸೌರವ್ ಗಂಗೂಲಿ, ಲೋಧಾ ಶಿಫಾರಸ್ಸಿನಂತೆ ಎರಡು ಅವಧಿಯ ನಂತರ ಬರಲಿರುವ ಕೂಲಿಂಗ್ ಆಫ್ ಪಿರೇಡ್ ನಿಯಮದನ್ವಯ 10 ತಿಂಗಳ ನಂತರ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆಯಬೇಕಿದೆ.

LEAVE A REPLY

Please enter your comment!
Please enter your name here

1 × five =