ರಾಷ್ಟ್ರೀಯ CBSC ಖೋ-ಖೋ: ಚಿತ್ರಕೂಟ ಬಾಲಕಿಯರು ಚಾಂಪಿಯನ್ಸ್

0

ಬೆಂಗಳೂರು, ನವೆಂಬರ್ 15: ಬೆಂಗಳೂರಿನ ಪ್ರತಿಷ್ಟಿತ ಚಿತ್ರಕೂಟ ಶಾಲೆಯ ಬಾಲಕಿಯರ ತಂಡ ರಾಷ್ಟೀಯ ಸಿಬಿಎಸ್ ಸಿ ಕೊಕ್ಕೋ ಚಾಂಪಿಯನ್ ಶಿಪ್ ನ ಟೂರ್ನಿಯಲ್ಲಿ ರನರ್ ಅಪ್ ಸ್ಥಾನಗಳಿಸಿದೆ..
ಇಂದು ಹರಿಯಾಣದಲ್ಲಿ ನಡೆದ ಅಂಡರ್ 17 ಬಾಲಕೀಯರ ಹರಿಯಾಣದ ಹಿಂದೂ ವಿದ್ಯಾಪೀಠ ಶಾಲೆಯ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 5-1,5-4 ನೇರ ಸೆಟ್ ಗಳಿಂದ ಚಿತ್ರಕೂಟ ಬಾಲಕೀಯರ ಶಾಲೆ ಸೋಲು ಕಂಡಿದೆ.


ಚಿತ್ರಕೂಟ ಶಾಲೆಯ ಅಮೂಲ್ಯ ಎಂ. ಇಡೀ ಟೂರ್ನಿಯ ಬೆಸ್ಟ್ ಚೇಸರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ..
ನವೆಂಬರ್ 9ರಿಂದ ನಡೆದ ಈ ರಾಷ್ಟ್ರೀಯ ಚಾಪಿಂಯನ್ ಟೂರ್ನಿಗೆ ದೇಶದ 54 ವಿವಿಧ ಶಾಲಾ ತಂಡಗಳು ಭಾಗಿಯಾಗಿದ್ದವು..
ಕ್ವಾಟರ್ಸ್ ಫೈನಲ್ ಪೊಡರ್ ಅಂತರಾಷ್ಟ್ರೀಯ ಶಾಲೆಯ ವಿರುದ್ಧ ಗೆಲವು ಸಾಧಿಸಿದ್ದ ಚಿತ್ರಕೂಟ ಮಹಿಳಾ ತಂಡ ಬಳಿಕ ಸೆಮಿ ಫೈನಲ್ ನಲ್ಲಿ ನಾಲ್ಗೊಂಡ ಪಬ್ಲಿಕ್ ಸ್ಕೂಲ್ ನ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಫೈನಲ್ ತಲುಪಿತ್ತು..
ಶಾಲೆಯ ಚೇರ್ಮನ್ ಚೈತನ್ಯ ಹಾಗೂ ಪ್ರಶುಪಾಲರಾದ ಜ್ಯೋತಿ ತಂಡದ ಸಾಧನೆ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ರು.

LEAVE A REPLY

Please enter your comment!
Please enter your name here

seventeen + 16 =