ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ಸತತ 6ನೇ ಜಯ ತಂದ ರೋಹನ್ ಕದಂ

0

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮನೀಶ್ ಪಾಂಡೆ ನಾಯಕತ್ವದ ಬಲಿಷ್ಠ ಕರ್ನಾಟಕ ತಂಡ ಸತತ 6ನೇ ಗೆಲುವು ದಾಖಲಿಸಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.

ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಡಿ’ ಗುಂಪಿನ ತನ್ನ 6ನೇ ಪಂದ್ಯದಲ್ಲಿ ಕರ್ನಾಟಕ ತಂಡ ಆತಿಥೇಯ ಒಡಿಶಾ ತಂಡವನ್ನು 51 ರನ್ ಗಳಿಂದ ಬಗ್ಗು ಬಡಿಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿತು. ಇದರಲ್ಲಿ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ರೋಹನ್ ಕದಂ ಅವರೊಬ್ಬರೇ 89 ರನ್ ಗಳಿಸಿದರು. 59 ಎಸೆತಗಳನ್ನೆದುರಿಸಿದ ಕದಂ 10 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ ಇನ್ನಿಂಗ್ಸ್ ಕಟ್ಟಿದರು. ಅಷ್ಟೇ ಅಲ್ಲದೆ ತಮ್ಮ ಉತ್ತಮ ಫಾರ್ಮನ್ನು ಮುಂದುವರಿಸಿ ಈ ಸಾಲಿನ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ತಮ್ಮ 6ನೇ ಪಂದ್ಯದಲ್ಲಿ 300 ರನ್ ಗಳ ಗಡಿ ದಾಟಿದರು. 

ಕದಂ ಅವರನ್ನು ಹೊರತು ಪಡಿಸಿ ಬೇರಾವ ಆಟಗಾರನೂ 20ರ ಗಡಿ ದಾಟಲಿಲ್ಲ.

ನಂತರ ಗುರಿ ಬೆನ್ನಟ್ಟಿದ ಒಡಿಶಾ 18.1 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟಾಯಿತು. ಕರ್ನಾಟಕ ಪರ ಮಿಸ್ಟ್ರಿ ಸ್ಪಿನ್ನರ್ ಕೆ.ಸಿ ಕಾರಿಯಪ್ಪ 4 ಓವರ್ ಗಳಲ್ಲಿ 15 ರನ್ನಿತ್ತು 4 ವಿಕೆಟ್ ಪಡೆದರೆ, ಯುವ ವೇಗಿ ವಿ.ಕೌಶಿಕ್ 8 ರನ್ನಿತ್ತು 3 ವಿಕೆಟ್ ಉರುಳಿಸಿದರು. ಶನಿವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಹರ್ಯಾಣ ತಂಡವನ್ನು ಎದುರಿಸಲಿದೆ.

Brief scores

Karnataka: 155/9 in 20 overs (Rohan Kadam 89, Shreyas Gopal 17, Karun Nair 10, Mayank Agarwal 10; BB Samantray 2/10) beat Odisha: 104 all out in 18.1 overs (SB Pradhan 32; KC Cariyappa 4/15, V Koushik 3/8, J Suchit 2/27, R Vinay Kumar 1/14) by 51 runs.

LEAVE A REPLY

Please enter your comment!
Please enter your name here

12 − 1 =