ಸೈಯದ್ ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ನಾಳೆ ಅಸ್ಸಾಂ ಎದುರಾಳಿ.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

0

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ನಾಳೆ ಆರಂಭವಾಗಲಿದ್ದು, ಕಟಕ್ ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ತಂಡ ಅಸ್ಸಾಂ ತಂಡವನ್ನು ಎದುರಿಸಲಿದೆ.
ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಗ್ರೂಪ್ ‘ಡಿ’ನಲ್ಲಿ ಸ್ಥಾನ ಪಡೆದಿದ್ದು, ಲೀಗ್ ಹಂತದಲ್ಲಿ 7 ಪಂದ್ಯಗಳನ್ನಾಡಲಿದೆ. ಕರ್ನಾಟಕದ ಎಲ್ಲಾ ಪಂದ್ಯಗಳು ಕಟಕ್ ನಲ್ಲಿ ನಡೆಯಲಿವೆ.

ಕರ್ನಾಟಕ ತಂಡ: ಮನೀಶ್ ಪಾಂಡೆ(ನಾಯಕ), ಕರುಣ್ ನಾಯರ್(ಉಪನಾಯಕ), ಮಯಾಂಕ್ ಅಗರ್ವಾಲ್, ರೋಹನ್ ಕದಂ, ಕೆ.ವಿ ಸಿದ್ಧಾರ್ಥ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಶರತ್ ಬಿ.ಆರ್(ವಿಕೆಟ್ ಕೀಪರ್), ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಎಂ.ಪ್ರಸಿದ್ಧ್ ಕೃಷ್ಣ, ಕೆ.ಸಿ ಕಾರಿಯಪ್ಪ, ಕೌಶಿಕ್ ವಿ., ಮನೋಜ್ ಭಾಂಡಗೆ, ಲವನೀತ್ ಸಿಸೋಡಿಯಾ(ವಿಕೆಟ್ ಕೀಪರ್). ಕೋಚ್: ಯರೇ ಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್, ಮ್ಯಾನೇಜರ್: ಅನುತೋಷ್ ಪಾಲ್, ಲಾಜಿಸ್ಟಿಕ್ ಮ್ಯಾನೇಜರ್: ಎ.ರಮೇಶ್ ರಾವ್.

ಸೈಯದ್ ಮುಷ್ತಾಕ್ ಅಲಿ ಟಿ20: ಕರ್ನಾಟಕ ತಂಡದ ವೇಳಾಪಟ್ಟಿ
ಫೆಬ್ರವರಿ 21: ಕರ್ನಾಟಕ Vs ಅಸ್ಸಾಂ (ಬೆಳಕ್ಕೆ 9.00ಕ್ಕೆ)
ಫೆಬ್ರವರಿ 22: ಕರ್ನಾಟಕ Vs ಬಂಗಾಳ (ಮಧ್ಯಾಹ್ನ 1.00ಕ್ಕೆ)
ಫೆಬ್ರವರಿ 24: ಕರ್ನಾಟಕ Vs ಅರುಣಾಚಲ ಪ್ರದೇಶ (ಮಧ್ಯಾಹ್ನ 1.00ಕ್ಕೆ)
ಫೆಬ್ರವರಿ 25: ಕರ್ನಾಟಕ Vs ಮಿಜೋರಾಂ (ಮಧ್ಯಾಹ್ನ 1.00ಕ್ಕೆ)
ಫೆಬ್ರವರಿ 27: ಕರ್ನಾಟಕ Vs ಛತ್ತೀಸ್ ಗಢ (ಬೆಳಕ್ಕೆ 9.00ಕ್ಕೆ)
ಫೆಬ್ರವರಿ 28: ಕರ್ನಾಟಕ Vs ಒಡಿಶಾ (ಮಧ್ಯಾಹ್ನ 1.00ಕ್ಕೆ)
ಮಾರ್ಚ್ 02: ಕರ್ನಾಟಕ Vs ಹರ್ಯಾಣ (ಮಧ್ಯಾಹ್ನ 1.00ಕ್ಕೆ)

LEAVE A REPLY

Please enter your comment!
Please enter your name here

17 − 15 =