ಯೋಧರಿಗೆ ಟೀಮ್ ಇಂಡಿಯಾ ಗೌರವ.. ತಲೆಯ ಮೇಲೆ ಆರ್ಮಿ ಕ್ಯಾಪ್..!

0

ರಾಂಚಿ, ಮಾರ್ಚ್ 8: ಪುಲ್ವಾಮ ಉಗ್ರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರಿಗೆ ಭಾರತ ಕ್ರಿಕೆಟ್ ತಂಡದ ಆಟಗಾರರು ಗೌರವ ಸಲ್ಲಿಸಿದ್ದಾರೆ.

ರಾಂಚಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಆರ್ಮಿ ಕ್ಯಾಪ್ ಧರಿಸಿ ಆಡುತ್ತಿದ್ದಾರೆ. ಪಂದ್ಯಕ್ಕೂ ಮೊದಲು ಮಾಜಿ ನಾಯಕ ಎಂ.ಎಸ್ ಧೋನಿ ಆಟಗಾರರಿಗೆ ಆರ್ಮಿ ಕ್ಯಾಪ್ ವಿತರಿಸಿದರು. ಭಾರತೀಯ ಭೂಸೇನೆಯಲ್ಲಿ ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.

PC: BCCI

ಈ ಪಂದ್ಯಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಆರ್ಮಿ ಕ್ಯಾಪ್ ನಲ್ಲಿ ಬಿಸಿಸಿಐ ಲಾಂಛನ ಕೂಡ ಇದೆ. 

ಆರ್ಮಿ ಕ್ಯಾಪ್ ಧರಿಸಿ ಆಡುವುದಷ್ಟೇ ಅಲ್ಲದೆ, ಪುಲ್ವಾಮ ಹುತಾತ್ಮ ಯೋಧರ ಕುಟುಂಬಗಳ ಕ್ಷೇಮಾಭಿವೃದ್ಧಿ ನಿಧಿಗೆ ಟೀಮ್ ಇಂಡಿಯಾ ಆಟಗಾರರು ಆರ್ಥಿಕ ನೆರವು ನೀಡಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರ ರಾಂಚಿ ಏಕದಿನ ಪಂದ್ಯದ ತಮ್ಮ ಸಂಭಾವನೆಯನ್ನು ಯೋಧರಿಗೆ ನೀಡಿದ್ದಾರೆ. 

LEAVE A REPLY

Please enter your comment!
Please enter your name here

five + seventeen =