U-16 ಫುಟ್ಬಾಲ್: ಪಾಕ್ ವಿರುದ್ಧ ಭಾರತದ ಬಾಲಕಿಯರಿಗೆ ಭರ್ಜರಿ ಜಯ

0

ಉಲಾನ್‌ಬಾಟರ್(ಮಂಗೋಲಿಯಾ), ಸೆಪ್ಟೆಂಬರ್ 19: ಸಂಘಟಿತ ಪ್ರದರ್ಶನವಿತ್ತ ಭಾರತದ 16 ವರ್ಷದೊಳಗಿನವರ ಬಾಲಕಿಯರ ತಂಡ ಎಎಫ್‌ಸಿ 16ರ ವಯೋಮಿತಿಯ ಮಹಿಳಾ ಚಾಂಪಿಯನ್‌ಷಿಪ್ ಅರ್ಹತಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 4-0 ಗೋಲುಗಳಿಂದ ಸದೆ ಬಡಿದಿದೆ.
ಭಾರತ ಪರ ಅವಿಕಾ ಸಿಂಗ್(22ನೇ ನಿಮಿಷ), ಸುನಿತಾ ಮುಂಡಾ(82ನೇ ನಿಮಿಷ) ಮತ್ತು ನಾಯಕಿ ಶಿಲ್ಕಿ ದೇವಿ(88ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಮತ್ತೊಂದು ಗೋಲನ್ನು ಪಾಕಿಸ್ತಾನದ ಗೋಲ್‌ಕೀಪರ್ ಆಯೆಶಾ ಉಡುಗೊರೆ ಗೋಲ್ ರೂಪದಲ್ಲಿ ನೀಡಿದರು.
ಈ ಗೆಲುವಿನೊಂದಿಗೆ ಭಾರತ ತಂಡ ಬಿ ಗುಂಪಿನಲ್ಲಿ 2 ಪಂದ್ಯಗಳಿಂದ 6 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು.

LEAVE A REPLY

Please enter your comment!
Please enter your name here

10 − 9 =