U-16 ಫುಟ್ಬಾಲ್: ಭಾರತಕ್ಕೆ ಜಯ ತಂದ ವಿಕ್ರಮ್ ಸಿಂಗ್

0
Slice of action from the match.

ಕೌಲಲಾಂಪುರ್, ಸೆಪ್ಟೆಂಬರ್ 21: ವಿಕ್ರಮ್ ಸಿಂಗ್ 86ನೇ ನಿಮಿಷದಲ್ಲಿ ಗಳಿಸಿದ ಪೆನಾಲ್ಟಿ ಗೋಲಿನ ನೆರವಿನಿಂದ ಭಾರತದ 16 ವರ್ಷದೊಳಗಿನವರ ಫುಟ್ಬಾಲ್ ತಂಡ, ವಿಯೆಟ್ನಾಂ ತಂಡವವನ್ನು 1-0 ಗೋಲಿನಿಂದ ಮಣಿಸಿದೆ.
ಪಂದ್ಯದುದ್ದಕ್ಕೂ ಭಾರತದ ಬಾಲಕರು ಪ್ರಾಬಲ್ಯ ಮೆರೆದರೂ, ಅಂತಿಮ ಕ್ಷಣದವರೆಗೂ ಗೋಲು ದಾಖಲಾಗಲಿಲ್ಲ. ಆದರೆ 86ನೆ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ವ್ಯರ್ಥಗೊಳಿಸದ ವಿಕ್ರಮ್ ಸಿಂಗ್ ಭಾರತದ ಗೆಲುವಿಗೆ ಕಾರಣರಾದರು.
ಸೋಮವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ, ಇರಾನ್ ಸವಾಲನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

3 + 17 =