U-19 ಏಷ್ಯಾ ಕಪ್ : ದೇವದತ್ ಶತಕ, ಭಾರತಕ್ಕೆ ಭರ್ಜರಿ ಜಯ

0
ದೇವದತ್ ಪಡಿಕಲ್ PC: BCCI

ಸವರ್(ಢಾಕಾ), ಸೆಪ್ಟೆಂಬರ್ 30: ಕರ್ನಾಟಕದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್(121) ಮತ್ತು ಅನುಜ್ ರಾವತ್(102) ಅವರ ಅಮೋಘ ಶತಕಗಳ ನೆರವಿನಿಂದ ಭಾರತದ 19 ವರ್ಷದೊಳಗಿನವರ ತಂಡ, ಅಂಡರ್-19 ಏಷ್ಯಾ ಕಪ್‌ನ ತನ್ನ 2ನೇ ಪಂದ್ಯದಲ್ಲಿ ಯುಎಇ ವಿರುದ್ಧ 227 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಇದರೊಂದಿಗೆ ಭಾರತ ತಂಡ ಗ್ರೂಪ್ ಎನಲ್ಲಿ ಸತತ 2 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 354 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಬಿರುಸಿನ ಆಟವಾಡಿದ ದೇವದತ್ 115 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 121 ರನ್ ಗಳಿಸಿದರು. ಮತ್ತೊಬ್ಬ ಓಪನರ್ ಅನುಜ್ ರಾವತ್ 115 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್‌ಗಳ ಸಹಿತ 102 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 34.5 ಓವರ್‌ಗಳಲ್ಲಿ 205 ರನ್ ಸೇರಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.
ನಂತರ ಕಠಿಣ ಗುರಿ ಬೆನ್ನಟ್ಟಿದ ಯುಎಇ ತಂಡ 33.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟಾಯಿತು. ಭಾರತ ಪರ ಗುಜರಾತ್‌ನ ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ 24 ರನ್ನಿತ್ತು 6 ವಿಕೆಟ್ ಕಬಳಿಸಿದರು.
ಮಂಗಳವಾರ ನಡೆಯಲಿರುವ ತನ್ನ 3ನೇ ಪಂದ್ಯದಲ್ಲಿ ಭಾರತ ತಂಡ, ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

Brief score: India U-19s: 354/6 in 50 overs (Devdutt Padikkal 121, Anuj Rawat 102, Pawan Shah 45, Sameer Choudhary 42; Alishan Sharafu 2/46, Aaron Benjamin 2/88) beat UAE U-19s: 127 all out in 33.5 overs (Ali Mirza 41, Figy John 24; Sidharth Desai 6/24) by 227 runs.

LEAVE A REPLY

Please enter your comment!
Please enter your name here

four × 1 =