U-23 ಮಹಿಳಾ ಚಾಲೆಂಜರ್ ಟೂರ್ನಿ: ಇಂಡಿಯಾ ‘ಬ್ಲೂ’ ತಂಡದಲ್ಲಿ ಕನ್ನಡತಿ ಪ್ರತ್ಯೂಷ

0

ಬೆಂಗಳೂರು, ಏಪ್ರಿಲ್ 7: ಇದೇ ತಿಂಗಳ 20ರಿಂದ 24ರವರೆಗೆ ರಾಂಚಿಯಲ್ಲಿ ನಡೆಯಲಿರುವ U-23 ಮಹಿಳಾ ಚಾಲೆಂಜರ್ ಏಕದಿನ ಟೂರ್ನಿಗೆ ಇಂಡಿಯಾ ರೆಡ್, ಇಂಡಿಯಾ ಗ್ರೀನ್ ಮತ್ತು ಇಂಡಿಯಾ ಬ್ಲೂ ತಂಡಗಳನ್ನು ಪ್ರಕಟಿಸಲಾಗಿದೆ.

ಇಂಡಿಯಾ ಬ್ಲೂ ತಂಡದಲ್ಲಿ ಕರ್ನಾಟಕದ ಭರವಸೆಯ ಆಟಗಾರ್ತಿ ಸಿ.ಪ್ರತ್ಯೂಷ ಸ್ಥಾನ ಪಡೆದಿದ್ದಾರೆ. ಈ ತಂಡವನ್ನು ಮಹಾರಾಷ್ಟ್ರದ ದೇವಿಕಾ ವೈದ್ಯ ಮುನ್ನಡೆಸಲಿದ್ದರೆ, ಇಂಡಿಯಾ ರೆಡ್ ತಂಡಕ್ಕೆ ಹಿಮಾಚಲ ಪ್ರದೇಶದ ಹರ್ಲೀನ್ ಡಿಯೋಲ್ ಮತ್ತು ಇಂಡಿಯಾ ಗ್ರೀನ್ ತಂಡಕ್ಕೆ ಸುಶ್ರೀ ದಿವ್ಯದರ್ಶಿನಿ ನಾಯಕಿಯರಾಗಿ ನೇಮಕಗೊಂಡಿದ್ದಾರೆ.

ಹೆರಾನ್ಸ್ ಕ್ರಿಕೆಟ್ ಕ್ಲಬ್ ಪ ಆಡುವ ಪ್ರತ್ಯೂಷ ಲೆಗ್ ಸ್ಪಿನ್ನರ್ ಮತ್ತು ಬಲಗೈ ಬ್ಯಾಟರ್ ಆಗಿದ್ದು, ಕರ್ನಾಟಕ ತಂಡದ ಮ್ಯಾಚ್ ವಿನ್ನರ್ ಆಗಿದ್ದಾರೆ. 

LEAVE A REPLY

Please enter your comment!
Please enter your name here

seven − three =