ತೆಂಡೂಲ್ಕರ್ ಮೈದಾನದಲ್ಲಿ ಕನ್ನಡದ ‘ವನಿತೆ’ ಆರ್ಭಟ.. ಟೀಮ್ ಇಂಡಿಯಾ ಕಂಬ್ಯಾಕ್..?

0

ಬೆಂಗಳೂರು, ಮಾರ್ಚ್ 9: ಕರ್ನಾಟಕ ಮಹಿಳಾ ತಂಡದ ಸ್ಫೋಟಕ ಬ್ಯಾಟರ್ ವಿ.ಆರ್ ವನಿತಾ ಭಾರತ ತಂಡಕ್ಕೆ ಮರಳುವ ಹಾದಿಯಲ್ಲಿದ್ದಾರೆ.

ಟೀಮ್ ಇಂಡಿಯಾ ಕಂಬ್ಯಾಕ್ ಗುರಿಯಲ್ಲಿರುವ ವನಿತಾ ಬಿಸಿಸಿಐ ಸೀನಿಯರ್ ಮಹಿಳಾ ಟಿ20 ಲೀಗ್ ಟೂರ್ನಿಯಲ್ಲಿ ಭರ್ಜರಿ ಆಟವಾಡುತ್ತಿದ್ದಾರೆ. ಮುಂಬೈನ ಖಂಡಿವಿಲಿಯಲ್ಲಿರುವ ಸಚಿನ್ ತೆಂಡೂಲ್ಕರ್ ಜಿಮ್ಖಾನಾ ಮೈದಾನದಲ್ಲಿ ನಡೆದ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ವನಿತಾ ಕೇವಲ 51 ಎಸೆತಗಳಲ್ಲಿ 84 ರನ್ ಸಿಡಿಸಿ ಕರ್ನಾಟಕದ ಗೆಲುವಿಗೆ ಕಾರಣರಾಗಿದ್ದಾರೆ. 

ವೃತ್ತಿಜೀವನದ ಅಮೋಘ ಫಾರ್ಮ್ ನಲ್ಲಿರುವ ವನಿತಾ ತಮ್ಮ ಇತ್ತಿಚಿನ ಕೆಲ ಇನ್ನಿಂಗ್ಸ್ ಗಳಲ್ಲಿ 64, 134* 206, 76*, 23, 84 ರನ್ ಗಳಿಸಿ ಬಿಸಿಸಿಐ ಮಹಿಳಾ ಆಯ್ಕೆ ಸಮಿತಿಗೆ ಸ್ಟ್ರಾಂಗ್ ಮೆಸೇಜ್ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Harleen Deol
Priya Punia

ಭಾರತ ತಂಡ ಟಿ20 ಕ್ರಿಕೆಟ್ ಇತ್ತೀಚೆಗೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗುತ್ತಿದೆ ದೆಹಲಿಯ ಪ್ರಿಯಾ ಪುನಿಯಾ ಮತ್ತು ಹಿಮಾಚಲ ಪ್ರದೇಶದ ಹರ್ಲೀನ್ ಕೌರ್ ಡಿಯೋಲ್ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ್ದಾರೆ. ಹೀಗಾಗಿ ಇದು ಕನ್ನಡತಿ ವನಿತಾಗೆ ಮತ್ತೆ ಅವಕಾಶ ನೀಡಲು ಸೂಕ್ತ ಸಮಯ. 

LEAVE A REPLY

Please enter your comment!
Please enter your name here

2 × one =